ಕಾಪು, ಪಡುಬಿದ್ರಿಯಲ್ಲಿ 23 ಕೊರೋನ ಪಾಸಿಟಿವ್

Update: 2020-08-01 15:07 GMT

ಪಡುಬಿದ್ರಿ, ಆ.1: ಕಾಪು ಹಾಗೂ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಶನಿವಾರ ಒಂದೇ ಮನೆಯ 9ಮಂದಿ ಸೇರಿ ಒಟ್ಟು 23 ಮಂದಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ.

ಇವರು ಪ್ರಾಥಮಿಕ ಸಂಪರ್ಕದಿಂದಲೇ ಸೋಂಕಿಗೊಳಗಾಗಿದ್ದಾರೆ. ಹೋಂ ಕ್ವಾರಂಟೈನ್‌ನಲ್ಲಿ ಇದ್ದು, ಬಾಧೆಗೊಳಗಾಗಿರುವುದು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಈಗಾಗಲೇ ಮನೆ ಸೀಲ್‌ಡೌನ್ ಆಗಿದ್ದು ಇವರೆಲ್ಲರೂ ಅಲ್ಲೇ ಹೋಂ ಕ್ವಾರೆಂಟೈನ್‌ ಗೊಳಗಾಗಿದ್ದಾರೆ.

ಪಡುಬಿದ್ರಿ ಮುರುಡಿಕೇರಿಯ ಪುರುಷ, ನಡ್ಸಾಲು ಕಾರ್ಕಳ ರಸ್ತೆಯ ಇಬ್ಬರು ಮಹಿಳೆಯರು, ತೆಂಕ ಗ್ರಾಮದ ಪುರುಷ, ಹೆಜಮಾಡಿಯ ಮಹಿಳೆ, ಬಾಲಕಿ, ಬಡಾ ಗ್ರಾಮದ ಇಬ್ಬರು ಮಹಿಳೆಯರು, ಪಡುಬಿದ್ರಿ ಬೀಚ್ ಬಳಿಯ ಮಹಿಳೆ, ಪಾದೆಬೆಟ್ಟಿನ ಪುರುಷ ಪ್ರಾಥಮಿಕ ಸಂಪರ್ಕದಿಂದ ಕೊರೋನ ಸೋಂಕಿ ಗೊಳಗಾಗಿದ್ದಾರೆ.

ಒಂದೇ ಮನೆಯ 9 ಮಂದಿ: ಬಡಾ ಭಾಸ್ಕರ ನಗರದ ಒಂದೇ ಮನೆಯ 9 ಮಂದಿ ಸೋಂಕಿಗೊಳಗಾಗಿದ್ದಾರೆ. ಈ ಮನೆಯಲ್ಲಿ 15ಕ್ಕೂ ಅಧಿಕ ಮಂದಿಯ ಗಂಟಲು ದ್ರವ ತೆಗೆದು ಪರೀಕ್ಷಣೆಗೊಳಪಡಿಸಲಾಗಿತ್ತು. ಏಳು ಮಂದಿ ಮಹಿಳೆಯರು, ಇಬ್ಬರು ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು ಮೂವರಿಗೆ ಸೋಂಕು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News