ಆಟೋಮೆಟಿಕ್ ಸೆನಿಟೈಸರ್ ಯಂತ್ರ ಅವಿಷ್ಕರಿಸಿದ ಭಟ್ಕಳ ಮೂಲದ ವಿದ್ಯಾರ್ಥಿ ಮುಹಮ್ಮದ್ ಸುಹೈಲ್

Update: 2020-08-01 15:52 GMT

ಭಟ್ಕಳ: ಕೋವಿಡ್ 19 ಜನರಲ್ಲಿ ಕೇವಲ ಆತಂಕವನ್ನು ಮಾತ್ರ ಹುಟ್ಟು ಹಾಕಿಲ್ಲ, ಮುಖಗವಸು, ಸೆನಿಟೈಸರ್ ಹಾಗೂ ಅದರ ಸಿಂಪಡಣಾ ಯಂತ್ರದವರೆಗೆ  ಆವಿಷ್ಕಾರ, ವಿನ್ಯಾಸಗಳಂತಹ ರಚನಾತ್ಮಕ ಕಾರ್ಯಗಳಿಗೂ ಅವಕಾಶ ಮಾಡಿಕೊಟ್ಟಿದೆ. ಇದೀಗ ಆ ಸಾಲಿಗೆ ಮಂಗಳೂರು ಪಿ.ಎ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿರುವ ಭಟ್ಕಳ ಮೂಲದ ವಿದ್ಯಾರ್ಥಿ ಮುಹಮ್ಮದ್ ಸುಹೈಲ್ ಸಿದ್ಧಪಡಿಸಿರುವ ಆಟೋಮೆಟಿಕ್ ಸೆನಿಟೈಸರ್ ಸಿಂಪಡಣಾ ಯಂತ್ರ ಸೇರಿದೆ.

ಯಂತ್ರದ ಒಳಗೆ ಕೈ ಇಟ್ಟರೆ ತನ್ನಿಂದ ತಾನೆ ಕೈ ಸೆನಿಟೈಸೇಶನ್‍ಗೆ ಒಳಪಡುತ್ತದೆ. ಸೆನ್ಸರ್ ಬಳಸಿ ಸುಹೈಲ್ ಈ ಕಡಿಮೆ ಖರ್ಚಿನ ಯಂತ್ರವನ್ನು ಆವಿಷ್ಕರಿಸಿದ್ದಾರೆ. ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಈ ಯಂತ್ರವನ್ನು ಬಳಸಬಹುದಾಗಿದೆ. ಈಗಾಗಲೇ ಭಟ್ಕಳದ 2 ಪ್ರಮುಖ ಮಸೀದಿಗಳಲ್ಲಿ ಈ ಯಂತ್ರದ ಬಳಕೆ ಆರಂಭವಾಗಿದೆ. ವಿದ್ಯಾರ್ಥಿಯ ಈ ಸಾಧನೆಗೆ ಮಂಗಳೂರು ಪಿ.ಎ.ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರು, ಭಟ್ಕಳದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News