ಪಡುಬಿದ್ರಿಯಲ್ಲಿ ರೈತ ಬಂಧು ಕಾರ್ಯಕ್ರಮ

Update: 2020-08-01 16:11 GMT

ಪಡುಬಿದ್ರಿ: ಕೃಷಿ ಅವನತಿಯತ್ತ ಸಾಗುತಿರುವ ಈ ಸಂದರ್ಭದಲ್ಲಿ ಯುವ ಜನರನ್ನು ಕೃಷಿಯತ್ತ ಒಲುವು ಮೂಡಿಸುವಂತಹ ಕಾರ್ಯಕ್ರಮಗಳು ನಿರಂತರ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ ಕರೆ ನೀಡಿದರು.

ಅವರು ಶನಿವಾರ ಪಡುಬಿದ್ರಿ ರೋಟರಿ ಕ್ಲಬ್ ಬ್ರಹ್ಮಸ್ಥಾನ ಬಳಿಯ ಗದ್ದೆಯಲ್ಲಿ ನಡೆದ ರೈತ ಬಂಧು ಕಾರ್ಯಕ್ರಮದಲ್ಲಿ ನೇಜಿ ನೆಡುವ ಪ್ರಾತ್ಯಕ್ಷಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೋವಿಡ್-19 ಬಳಿಕ ಯುವ ಜನತೆ ಐಟಿ, ಬಿಟಿಗೆ ವಿದಾಯ ಹೇಳಿ ಕೃಷಿಯತ್ತ ಗಮನ ಹರಿಸುತಿದ್ದು, ಇದರಿಂದ ಕೃಷಿ ಚಟುವಟಿಕೆಯೂ ಈ ಭಾರಿ ಅಧಿಕವಾಗಿದೆ. ಸಾವಯವ ಕೃಷಿ ಪದ್ದತಿಯನ್ನು ಬೆಳಸುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕಾಗಿದೆ ಎಂದರು. 

ಪದವಿಧರಾಗಿ ತನ್ನನು ತಾನು ಸಂಪೂರ್ಣ  ಕೃಷಿಯಲ್ಲಿ ತೂಡಗಿಸಿ ಕೂಂಡಿರುವ ಯುವ ಕೃಷಿಕ ರಾಜೇಶ್ ಶೇರಿಗಾರ್ ರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ನಿಕಟ ಪೂರ್ವ ವಲಯ ಸಹಾಯಕ ಗವರ್ನರ್ ಗಣೇಶ್ ಅಚಾರ್ಯ ಉಚ್ಚಿಲ,  ಪೂರ್ವ ಅಧ್ಯಕ್ಷರಾದ ಮಾಧವ ಸುವರ್ಣ,  ಪಿ. ಕೃಷ್ಣ ಬಂಗೇರ, ರಮೀಝ್ ಹುಸೇನ್ , ಸದಸ್ಯರಾದ ರಮೇಶ್ ಯು.,  ಬಿ.ಯಸ್.ಅಚಾರ್ಯ,  ಸಂತೋಷ್ ಪಡುಬಿದ್ರಿ, ಗೀತಾ ಅರುಣ್, ತಸ್ಲೀನ್ ಅರಾಃ, ಮಮತಾ ಸಾಲ್ಯಾನ್, ಪುಷ್ಪವತಿ ಅಚಾರ್ಯ, ಲೋಹಿತಾಕ್ಷಣ ಸುವರ್ಣ ಉಪಸ್ಥಿತರಿದ್ದರು.

ರೋಟರಿ ಅಧ್ಯಕ್ಷ ಕೇಶವ್ ಸಾಲ್ಯಾನ್ ಸ್ವಾಗತಿಸಿದರು.  ಕಾರ್ಯದರ್ಶಿ ಮಹಮ್ಮದ್ ನಿಯಾಜ್ ವಂದಿಸಿ, ಸುಧಾಕರ್ ಕೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News