ಉಯಿಘರ್ ಜನಾಂಗೀಯರ ಮಾನವಹಕ್ಕು ಉಲ್ಲಂಘನೆ: ಚೀನಾದ ಕಂಪೆನಿ ವಿರುದ್ಧ ಅಮೆರಿಕ ದಿಗ್ಬಂಧನ

Update: 2020-08-01 18:11 GMT

ವಾಶಿಂಗ್ಟನ್, ಆ. 1: ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿ ಉಯಿಘರ್ ಮತ್ತು ಇತರ ಜನಾಂಗೀಯ ಅಲ್ಪಸಂಖ್ಯಾತರ ಮಾನವಹಕ್ಕುಗಳನ್ನು ಉಲ್ಲಂಸಿರುವುದಕ್ಕಾಗಿ ಚೀನಾದ ಒಂದು ಪ್ರಭಾವಿ ಕಂಪೆನಿ ಮತ್ತು ಇಬ್ಬರು ಅಧಿಕಾರಿಗಳ ವಿರುದ್ಧ ಅಮೆರಿಕವು ಶುಕ್ರವಾರ ದಿಗ್ಬಂಧನಗಳನ್ನು ವಿಧಿಸಿದೆ.

ಹ್ಯೂಸ್ಟನ್‌ನಲ್ಲಿರುವ ಚೀನಾದ ಕೌನ್ಸುಲೇಟ್ ಕಚೇರಿಯನ್ನು ಅಮೆರಿಕ ಮತ್ತು ಇದಕ್ಕೆ ಪ್ರತಿಯಾಗಿ ಚೆಂಗ್ಡುನಲ್ಲಿರುವ ಅಮೆರಿಕದ ಕೌನ್ಸುಲೇಟ್ ಕಚೇರಿಯನ್ನು ಚೀನಾ ಮುಚ್ಚಿಸಿದ ಬಳಿಕ, ಅಮೆರಿಕ-ಚೀನಾ ಸಂಬಂಧಕ್ಕೆ ಬಿದ್ದ ಇನ್ನೊಂದು ದೊಡ್ಡ ಹೊಡೆತ ಇದಾಗಿದೆ.

ಕ್ಸಿನ್‌ಜಿಯಾಂಗ್ ಪ್ರೊಡಕ್ಷನ್ ಆ್ಯಂಡ್ ಕನ್‌ಸ್ಟ್ರಕ್ಷನ್ ಕಾರ್ಪ್ಸ್ (ಎಕ್ಸ್‌ಪಿಸಿಸಿ), ಎಕ್ಸ್‌ಪಿಸಿಸಿಯ ಮಾಜಿ ಪಕ್ಷ ಕಾರ್ಯದರ್ಶಿ ಸುನ್ ಜಿನ್‌ಲಾಂಗ್ ಮತ್ತು ಎಕ್ಸ್‌ಪಿಸಿಸಿಯ ಉಪ ಪಕ್ಷ ಕಾರ್ಯದರ್ಶಿ ಹಾಗೂ ಕಮಾಂಡರ್ ಪೆಂಗ್ ಜಿಯಾರುಯಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಅಮೆರಿಕದ ಖಜಾನೆ ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ. ಈ ಕಂಪೆನಿ ಮತ್ತು ಇಬ್ಬರು ಅಧಿಕಾರಿಗಳು ಕ್ಸಿನ್‌ಜಿಯಾಂಗ್‌ನಲ್ಲಿರುವ ಜನಾಂಗೀಯ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಇಲಾಖೆ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News