ಪೋರ್ಚುಗಲ್: ಕರಿಯ ನಟನ ಹತ್ಯೆ ಜನಾಂಗೀಯ ತಾರತಮ್ಯ ವಿರೋಧಿಸಿ ಬೃಹತ್ ಪ್ರತಿಭಟನೆ

Update: 2020-08-01 18:29 GMT

ಲಿಸ್ಬನ್ (ಪೋರ್ಚುಗಲ್), ಆ. 1: ಕಳೆದ ವಾರಾಂತ್ಯದಲ್ಲಿ ಪೋರ್ಚುಗಲ್ ರಾಜಧಾನಿ ಲಿಸ್ಬನ್‌ನ ಜನನಿಬಿಡ ರಸ್ತೆಯಲ್ಲಿ ಹತ್ಯೆಗೀಡಾದ ಕರಿಯ ನಟ ಬ್ರೂನೊ ಕ್ಯಾಂಡೆಗೆ ನ್ಯಾಯಕ್ಕಾಗಿ ಆಗ್ರಹಿಸಿ ನೂರಾರು ಜನಾಂಗೀಯ ತಾರತಮ್ಯ ವಿರೋಧಿ ಹೋರಾಟಗಾರರು ನಗರದ ಪ್ರಮುಖ ಚೌಕವೊಂದರಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ಗಿನಿ ಮೂಲದ 39 ವರ್ಷದ ಕ್ಯಾಂಡೆಗೆ ಲಿಸ್ಬನ್ ನಗರ ಕೇಂದ್ರದಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಅವೆನಿಡ ಡಿ ಮೊಸ್ಕವಿಡೆ ಎಂಬಲ್ಲಿ 80 ವರ್ಷಕ್ಕಿಂತಲೂ ಅಧಿಕ ಪ್ರಾಯದ ಬಿಳಿಯ ಮುದುಕನೊಬ್ಬ ಹಲವು ಬಾರಿ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಹತ್ಯೆಗೆ ಸಂಬಂಧಿಸಿ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಹತ್ಯೆ ನಡೆದ ಮೂರು ದಿನಗಳ ಮೊದಲು, ಶಂಕಿತನು ಕ್ಯಾಂಡೆಗೆ ಕೊಲೆ ಬೆದರಿಕೆ ಹಾಕಿದ್ದನು ಹಾಗೂ ಜನಾಂಗೀಯ ನಿಂದನೆಯ ಮಾತುಗಳನ್ನು ಆಡಿದ್ದನು ಎಂದು ಕ್ಯಾಂಡೆಯ ಕುಟುಂಬ ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

 ಱಱನಮಗೆ ಇಲ್ಲಿ ಶಾಂತಿಯಿಂದ ಬದುಕಲು ಯಾಕೆ ಸಾಧ್ಯವಿಲ್ಲ? ನಾವು ಕೆಲಸ ಮಾಡುತಿದ್ದೇವೆ ಹಾಗೂ ತೆರಿಗೆಗಳನ್ನು ಪಾವತಿಸುತ್ತಿದ್ದೇವೆ. ಅವರು ಯಾಕೆ ಯಾವಾಗಲೂ ಕಪ್ಪು ಜನರನ್ನು ಕೊಲ್ಲುತ್ತಿದ್ದಾರೆ?ೞೞಎಂದು ಪ್ರತಿಭಟನಾಕಾರ್ತಿಯೊಬ್ಬರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News