ಒಂದೇ ಮನೆಯ ಮೂವರು ಸೇರಿ ಪುತ್ತೂರು, ಕಡಬದಲ್ಲಿ 11 ಕೊರೋನ ಸೋಂಕು ದೃಢ

Update: 2020-08-02 06:16 GMT

ಪುತ್ತೂರು : ನೆಹರೂ ನಗರ ಸಿಟಿಗುಡ್ಡೆ ನಿವಾಸಿ 41 ವರ್ಷದ ಪುರುಷ, 33 ವರ್ಷದ ಅವರ ಪತ್ನಿ ಹಾಗೂ 6 ವರ್ಷದ ಪುತ್ರ ಸೇರಿದಂತೆ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ರವಿವಾರ ಒಟ್ಟು 11 ಕೊರೋನ ಸೋಂಕು ದೃಢಪಟ್ಟಿದೆ ಎಂದು ತಾಲೂಕು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ನಗರಸಭಾ ವ್ಯಾಪ್ತಿಯ ದರ್ಬೆ ನಿವಾಸಿ 27 ವರ್ಷದ ಯುವಕ, ನೆಹರೂ ನಗರದ 39 ವರ್ಷದ ಮಹಿಳೆ, ಬೊಳುವಾರು ನಿವಾಸಿ 61 ವರ್ಷದ ಮಹಿಳೆ, ಗ್ರಾಮೀಣ ಪ್ರದೇಶವಾದ ಆರಿಯಡ್ಕ ನಿವಾಸಿ 58 ವರ್ಷದ ಪುರುಷ, ಕಬಕ ನಿವಾಸಿಗಳಾದ 36 ಮತ್ತು 23 ವರ್ಷದ ಯುವಕರು, ಬೆಳ್ಳಿಪ್ಪಾಡಿ ನಿವಾಸಿ 21 ವರ್ಷದ ಯುವಕನಲ್ಲಿ ಕೊರೋನ ಪಾಸಿಟಿವ್ ದೃಡಪಟ್ಟಿದೆ.

ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಹೊಸಮಜಲು ನಿವಾಸಿ 25 ವರ್ಷದ ಯುವಕನಲ್ಲಿ ಕೊರೋನ ಪಾಸಿಟಿವ್ ದೃಡಟ್ಟಿದೆ. ಈ ತನಕ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಒಟ್ಟು 290 ಕೊರೋನ ಪಾಸಿಟಿವ್ ವರದಿಯಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News