ಐವನ್ ಡಿಸೋಜಾಗೆ ಕೊರೋನ : ಶಾಸಕ ಯು.ಟಿ.ಖಾದರ್ ಸ್ವಯಂ ನಿರ್ಬಂಧ

Update: 2020-08-02 07:09 GMT

ಮಂಗಳೂರು, ಆ. 2: ಮಾಜಿ ಶಾಸಕ ಐವನ್ ಡಿಸೋಜಾರವರಿಗೆ ಕೊರೋನ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣಕ್ಕೆ ಶಾಸಕ ಯು.ಟಿ.ಖಾದರ್ ಸ್ವಯಂ ನಿರ್ಬಂಧ ಹಾಕಿಕೊಂಡಿದ್ದಾರೆ.

ಹೀಗಾಗಿ ಕೆಲ ದಿನಗಳ ಕಾಲ ಜನಸಾಮಾನ್ಯರ ಭೇಟಿ, ಕ್ಷೇತ್ರ ಅಭಿವೃದ್ಧಿ ಬಗ್ಗೆ ಜಿಲ್ಲಾಧಿಕಾರಿ ಜತೆಗಿನ ಸಭೆ, ಕ್ಷೇತ್ರದಲ್ಲಿ ನಿಗದಿಯಾಗಿದ್ದ ವಿವಿಧ ಕಾರ್ಯಕ್ರಮಗಳನ್ನು ಮುಂದೂಡಿರುವುದಾಗಿ ಅವರು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ.

ಜನ ಸಾಮಾನ್ಯರ ಸೇವೆಗೆ ದೂರವಾಣಿ ಮೂಲಕ ಲಭ್ಯವಿದ್ದು ತಮ್ಮನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿರುವ ಅವರು, ಐವನ್ ಡಿಸೋಜಾ ಜತೆ ಸಂಪರ್ಕದಲ್ಲಿದ್ದವರಿಗೆ ಕೆಮ್ಮು, ಜ್ವರ ಮೊದಲಾದ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಪರೀಕ್ಷೆಗೆ ಒಳಗಾಗುವಂತೆ ಅವರು ಮನವಿ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News