ಮಂಗಳೂರು: 'ಸಂಡೇ ಲಾಕ್‌ಡೌನ್' ತೆರವು ; ಜನರ ಓಡಾಟ ವಿರಳ

Update: 2020-08-02 09:34 GMT

ಮಂಗಳೂರು, ಆ.2: ಕೊರೋನ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಾ ಕ್ರಮವಾಗಿ ಹೇರಲಾಗಿದ್ದ ರವಿವಾರದ ಸಂಪೂರ್ಣ ಲಾಕ್‌ಡೌನ್ ಇಂದಿನಿಂದ ತೆರವುಗೊಂಡಿದೆ. ನಗರದಲ್ಲಿ ವಾಹನಗಳ ಸಂಚಾರ, ವ್ಯಾಪಾರ ವಹಿವಾಟಿಗೆ ಅವಕಾಶ ದೊರಕಿದೆ. ಹಾಗಿದ್ದರೂ ಜನರ ಓಡಾಟ ಮಾತ್ರ ಕಡಿಮೆಯಾಗಿದೆ.

ಹಿಂದೆಲ್ಲಾ ರವಿವಾರದಂದು ಖರೀದಿ, ತಿರುಗಾಟ, ವಾಹನಗಳಲ್ಲಿ ಸಂಚಾರ ಅಧಿಕವಾಗಿ ಕಂಡು ಬರುತ್ತಿತ್ತು. ವಾರಪೂರ್ತಿ ವ್ಯವಹಾರ, ಕೆಲಸದಲ್ಲಿ ಮುಳುಗಿ ಹೋಗುತ್ತಿದ್ದ ಜನರು ರವಿವಾರ ಕೊಂಚ ರಿಲ್ಯಾಕ್ಸ್ ಜತೆಗೆ ಖರೀದಿಗಾಗಿ ಮಾರುಕಟ್ಟೆ, ಮಾಲ್‌ಗಳಿಗೆ ಭೇಟಿ ನೀಡುವುದು ಸಾಮಾನ್ಯ ವಾಗಿತ್ತು. ಆದರೆ ಕೊರೋನದಿಂದಾಗಿ ವಿಧಿಸಲಾಗಿದ್ದ ಲಾಕ್‌ಡೌನ್ ಉಳಿದ ದಿನಗಳಲ್ಲಿ ತೆರವುಗೊಳಿಸಲಾಗಿದ್ದರೂ ಕೆಲವು ವಾರಗಳಿಂದ ಸಂಡೇ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತು. ಆದರೆ ಇದೀಗ ರವಿವಾರ ಲಾಕ್‌ಡೌನ್ ಕೂಡಾ ತೆರವುಗೊಂಡಿದೆ. ಹಾಗಿದ್ದರೂ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ನಗರದ ಮಾರಕಟ್ಟೆಗಳಲ್ಲಿ ಜನ ಸಂಚಾರ ವಿರಳವಾಗಿದೆ. ಈ ನಡುವೆ ಮಳೆಯೂ ಸುರಿಯುತ್ತಿರುವುದರಿಂದ ಜನ ಮನೆಗಳಲ್ಲಿಯೇ ಸಮಯ ಕಳೆಯಲು ಆದ್ಯತೆ ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News