ಎಫ್ ಮಮ್ಮಿ ಅಮೆಮ್ಮಾರ್ ನಿಧನ

Update: 2020-08-02 17:49 GMT

ಮಂಗಳೂರು, ಆ.2: ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಎಫ್. ಮಮ್ಮಿ ಅಮೆಮಾರ್(72) ಅಲ್ಪಕಾಲದ ಅಸೌಖ್ಯದಿಂದ ಅಮೆಮಾರ್‌ನ ಸ್ವಗೃಹದಲ್ಲಿ ರವಿವಾರ ನಿಧನರಾದರು.

ಇವರು ಪುದು ಗ್ರಾಮದ ಕಾಂಗ್ರೆಸ್ ಸಂಚಾಲಕರಾಗಿ, ವಲಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಮೆಮಾರ್ ಮಸೀದಿಯ ಆಡಳಿತ ಸಮಿತಿ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಸಾಕ್ಷರತಾ ಆಂದೋಲನದ ಸಂದರ್ಭದಲ್ಲಿ ಪುದು ಗ್ರಾಮದ ಇನ್‌ಚಾರ್ಜ್ ಆಗಿ, ಅಮೆಮಾರ್ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ, ಅಂಗನವಾಡಿ ಕೇಂದ್ರದ ಆಜೀವ ಸದಸ್ಯರಾಗಿಯೂ ಅವಿರತ ಸೇವೆ ಸಲ್ಲಿಸಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಪುದು-ಅಮೆಮಾರ್‌ನ ಬದ್ರಿಯಾ ಜುಮ್ಮಾ ಮಸೀದಿಯ ವಠಾರದಲ್ಲಿ ನೆರವೇರಿತು.

ಸಂತಾಪ: ಮೃತ ಎಫ್. ಮಮ್ಮಿ ಅವರಿಗೆ ಪುದು ಗ್ರಾಮ.ಪಂ ಅಧ್ಯಕ್ಷ ರಮ್ಲಾನ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಉಮರ್ ಫಾರೂಕು, ಎಸ್ಡಿಪಿಐ ಮುಖಂಡರಾದ  ಹಾಜಿ ಸುಲೈಮಾನ್ ಉಸ್ತಾದ್,  ಇಕ್ಬಾಲ್ ಅಮೆಮ್ಮಾರ್, ಮಾಜಿ ಗ್ರಾಪಂ ಸದಸ್ಯ ಬಶೀರ್ ತಂಡೇಲ್, ಕೆಸ್ಸಾರ್ಟಿಸಿ ನಿವೃತ್ತ ಟಿಸಿ ಎಫ್.ಎ. ಖಾದರ್, ರಮ್ಲಾನ್, ಇಕ್ಬಾಲ್ (ದರ್ಬಾರ್), ಅಖ್ತಾರ್ ಹುಸೈನ್, ವಿ.ಎಚ್. ಖರೀಮ್, ಎಫ್.ಎ. ಅಬ್ಬಾಸ್ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News