ಕೆಥೊಲಿಕ್ ಸಭಾದ 51 ಘಟಕಗಳಲ್ಲಿ ಸಾಮೂಹಿಕ ವನಮಹೋತ್ಸವ

Update: 2020-08-02 12:08 GMT

ಉಡುಪಿ, ಆ.2: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್, ಕುಂದಾಪುರ ವಲಯ ಹಾಗೂ ಗಂಗೊಳ್ಳಿ ಘಟಕಗಳ ವತಿಯಿಂದ ಉಡುಪಿ ಧರ್ಮ ಪ್ರಾಂತ್ಯದ 51 ಘಟಕಗಳಲ್ಲಿ ಏಕಕಾಲದಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಗಂಗೊಳ್ಳಿ ಚರ್ಚ್ ವ್ಯಾಪ್ತಿಯ ಕನ್ನಡಕುದ್ರು ಸಂತ ಜೋಸೆಫ್ ವಾಝ್ ಪಾಲನಾ ಕೇಂದ್ರದಲ್ಲಿ ಗಿಡ ನೆಡುವುದರ ಮೂಲಕ ರವಿವಾರ ಚಾಲನೆ ನೀಡ ಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಮಾತನಾಡಿ, ನೂರಾರು ಗಿಡಗಳನ್ನು ನೆಟ್ಟು ಬೆಳೆಸು ವುದೇ ವನಮಹೋತ್ಸವದ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಜಾಗೃತಿ ವಹಿಸಬೇಕು. ಪರಿಸರ ಸಮತೋಲನ ಕಾಪಾಡಲು ಪ್ರತಿ ಯೊಬ್ಬರು ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ. ಪ್ರತಿಯೊಬ್ಬರು ಪರಿಸರದ ಬಗ್ಗೆ ಅತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.

ಕೆಥೊಲಿಕ್ ಸಭಾ ಕುಂದಾಪುರ ವಲಯ ಅಧ್ಯಕ್ಷ ಮೇಬಲ್ ಡಿಸೋಜ, ಕೇಂದ್ರಿಯ ಸಮಿತಿ ಮಾಜಿ ಅಧ್ಯಕ್ಷ ಎಲ್ರೋಯ್ ಕಿರಣ್ ಕ್ರಾಸ್ತಾ, ಗಂಗೊಳ್ಳಿ ಘಟಕದ ಅಧ್ಯಕ್ಷ ರೋಶನ್ ಲೋಬೊ, ಕಾರ್ಯದರ್ಶಿ ಸೆಲಿನ್ ಲೋಬೊ, ವಲಯದ ನಿಕಟಪೂರ್ವ ಅಧ್ಯಕ್ಷ ಹೆರಿಕ್ ಗೊನ್ಸಾಲ್ವಿಸ್, ಕೋಶಾಧಿಕಾರಿ ಮೈಕಲ್ ಪಿಂಟೊ, ಕನ್ನಡಕುದ್ರು ವಾಳೆಯ ಗುರಿಕಾರ ಆಗ್ನೆಸ್ ಕ್ರಾಸ್ತಾ, ಪ್ರತಿನಿಧಿ ವಿನ್ಸೆಂಟ್ ಆಲ್ಮೇಡಾ ಉಪಸ್ಥಿತರಿದ್ದರು.

ರೋಶನ್ ಲೋಬೊ ಸ್ವಾಗತಿಸಿ, ಸೆಲಿನ್ ಲೋಬೊ ವಂದಿಸಿದರು. ಜೆನ್ನಿ ಬುತೆಲ್ಲೋ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ ಜಿಲ್ಲೆಯ 51 ಘಟಕಗಳ ನೇತೃತ್ವದಲ್ಲಿ ವನಮಹೋತ್ಸವ ಆಚರಣೆ ನಡೆಸಿದ್ದು ಕೋವಿಡ್-19ರ ಹಿನ್ನಲೆಯಲ್ಲಿ ಚರ್ಚುಗಳಲ್ಲಿ ಸಾಮೂಹಿಕ ವಾಗಿ ಸೇರಿ ಆಚರಣೆ ಮಾಡುವ ಬದಲು ಪ್ರತಿಯೊಬ್ಬರು ಗಿಡಗಳನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿ ಅದನ್ನು ಕುಟುಂಬದ ಸದಸ್ಯರೊಂದಿಗೆ ಸೇರಿ ನೆಟ್ಟು ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಅದರಂತೆ ಜಿಲ್ಲೆಯ ಎಲ್ಲಾ ಘಟಕಗಳಲ್ಲಿ ಈ ವನಮಹೋತ್ಸವ ಆಚರಣೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News