ಸಾಮಾನ್ಯ ಜ್ವರ ಪರೀಕ್ಷಿಸಲು ವೈದ್ಯರಿಗೆ ಅನುಮತಿ ನೀಡಲು ಕಾಂಗ್ರೆಸ್ ಆಗ್ರಹ

Update: 2020-08-02 12:13 GMT

ಉಡುಪಿ, ಆ.2: ಮಳೆಗಾಲದ ದಿನಗಳಲ್ಲಿ ಸಾಮಾನ್ಯವಾಗಿ ಬರುವ ಶೀತ, ನೆಗಡಿಗಳನ್ನೇ ವೈರಸ್ ಎಂದು ಪರಿಗಣಿಸದೆ ಸ್ಥಳೀಯ ವೈದ್ಯರಿಗೆ ತಪಾಸಣೆಗೆ ಅವಕಾಶ ಮಾಡಿಕೊಟ್ಟು ರೋಗ ನಿರೋಧಕ ಮದ್ದುಗಳನ್ನು ತೆಗೆದುಕೊಳ್ಳಲು ಅನುಮತಿ ನೀಡಬೇಕು. ಆ ಮೂಲಕ ಜನರು ಭಯಭೀತರಾಗಿ ಮಾನಸಿಕ ಅಸಮತೋಲನಕ್ಕೆ ಒಳಗಾಗುವುದನ್ನು ತಪ್ಪಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಜಿಲ್ಲಾಡಳಿತಕ್ಕೆ ಸಲಹೆ ನೀಡಿದೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೇತೃತ್ವದಲ್ಲಿ ಇತ್ತೀಚೆಗೆ ನಿಯೋಗ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ, ಜಿಲ್ಲಾಡಳಿತ ಗಮನಹರಿಸಬೇಕಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಿತು.

ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗಾಗಿ ಶೇ.50ರಷ್ಟು ಬೆಡ್‌ಗಳನ್ನು ಕಾದಿರಿಸ ಬೇಕೆಂದು ಆದೇಶಿಸಿದ್ದರೂ ಜಿಲ್ಲೆಯಲ್ಲಿ ಈ ಆದೇಶ ಇನ್ನೂ ಪಾಲನೆ ಆಗಿಲ್ಲ. ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಬೆಡ್‌ಗಳನ್ನು ಸೋಂಕಿತರಿಗೆ ಕಾದಿರಿಸಬೇಕು ಮತ್ತು ಖಾಸಗಿ ಆಸ್ಪತ್ರೆಗಳು ವಿಧಿಸುವ ಶುಲ್ಕ ಜನಸಾಮಾನ್ಯರ ಕೈಗೆಟಕುವಂತಿರಬೇಕು ಎಂದು ಕಾಂಗ್ರೆಸ್ ತಿಳಿಸಿದೆ.

ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಯು.ಆರ್.ಸಭಾಪತಿ, ಕೆಪಿಸಿಸಿ ಮುಖಂಡ ರಾದ ಮುರಳಿ ಶೆಟ್ಟಿ, ಎಂ.ಎ.ಗಫೂರ್, ವೆರೋನಿಕಾ ಕರ್ನೆಲಿಯೋ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ನೀರೇ ಕೃಷ್ಣ ಶೆಟ್ಟಿ, ಹರೀಶ್ ಕಿಣಿ, ವೈ.ಸುಕುಮಾರ್, ವಿಶ್ವಾಸ್ ವಿ.ಅಮೀನ್, ಶೇಖರ ಮಡಿವಾಳ, ಹರೀಶ್ ಶೆಟ್ಟಿ ಪಾಂಗಾಳ, ಇಸ್ಮಾಯಿಲ್ ಅತ್ರಾಡಿ, ಮಂಜುನಾಥ ಪೂಜಾರಿ, ಸುಭದ್ ರಾವ್, ಮಧುರಾಜ್ ಶೆಟ್ಟಿ, ಯತೀಶ್ ಕರ್ಕೇರ, ನಿತ್ಯಾನಂದ ಶೆಟ್ಟಿ, ಬಾಲಕೃಷ್ಣ ಪೂಜಾರಿ, ಎಂ.ಪಿ. ಮೊಯಿದಿನಬ್ಬ, ಯೋಗೀಶ್ ನಯನ್ ಇನ್ನ, ಕೃಷ್ಣ ಶೆಟ್ಟಿ ನಲ್ಲೂರ್, ಅಜಿತ್ ಹೆಗ್ಡೆ ಮಾಳ, ಪ್ರದೀಪ್ ಶೆಟ್ಟಿ, ಹಮದ್, ಝಮೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News