ಆ.3ರಂದು ಐಝೋನ್ ಆಪ್ಟಿಕಲ್‌ನ 2ನೆ ಮಳಿಗೆ ಉದ್ಘಾಟನೆ

Update: 2020-08-02 14:33 GMT

ಮಂಗಳೂರು, ಆ.2: ಕಂಕನಾಡಿ ಬೈಪಾಸ್ ರಸ್ತೆಯಲ್ಲಿರುವ ವಿಶ್ವಾಸ್ ಕ್ರೌನ್ ಬಿಲ್ಡಿಂಗ್‌ನಲ್ಲಿ ‘ಐಝೋನ್ ಆಪ್ಟಿಕಲ್’ನ 2ನೆ ಮಳಿಗೆ ಆ.3ರಂದು ಉದ್ಘಾಟನೆಗೊಳ್ಳಲಿದೆ. ಬೆಳಗ್ಗೆ 11 ಗಂಟೆಗೆ ನಡೆಯುವ ಸರಳ ಕಾರ್ಯಕ್ರಮದಲ್ಲಿ ಮಳಿಗೆಯನ್ನು ಶಾಸಕ ಯು.ಟಿ.ಖಾದರ್ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಮೇಯರ್ ದಿವಾಕರ್ ಪಾಂಡೇಶ್ವರ, ಮಾಜಿ ಶಾಸಕ ಮೊಯ್ದೀನ್ ಬಾವಾ, ವಿಶ್ವಾಸ್ ಬಾವಾ ಬಿಲ್ಡರ್ಸ್‌ನ ಆಡಳಿತ ನಿರ್ದೇಶಕರಾದ ಅಬ್ದುಲ್ ರವೂಫ್ ಪುತ್ತಿಗೆ, ದಾಯ್ಜಿವರ್ಲ್ಡ್ ಮೀಡಿಯಾ ಗ್ರೂಪ್‌ನ ಸಂಸ್ಥಾಪಕ ವಾಲ್ಟರ್ ನಂದಳಿಕೆ ಭಾಗವಹಿಸಲಿದ್ದಾರೆ.

ಐಝೋನ್ ಈಗಾಗಲೇ ಸಿಟಿ ಸೆಂಟರ್ ಮಾಲ್‌ನ ಸ್ಪಾರ್ ಸೂಪರ್ ಮಾರ್ಕೆಟ್‌ನ ಎದುರು ಪ್ರಥಮ ಮಳಿಗೆಯನ್ನು ಹೊಂದಿದೆ ಎಂದು ಮಳಿಗೆಯ ಆಡಳಿತ ಪಾಲುದಾರರಾದ ಮುಹಮ್ಮದ್ ರಫೀಕ್ ಕೃಷ್ಣಾಪುರ ಹಾಗೂ ಬಿಸ್ನೆಸ್ ಡೆವಲಪರ್ ಅಬ್ದುಲ್ ನಾಸಿರ್ ಚಾಬು ಕುದ್ರೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News