ಸಂಡೇ ಅನ್‌ಲಾಕ್: ಉಡುಪಿಯಲ್ಲಿ ಜನ ಸಂಚಾರ ವಿರಳ

Update: 2020-08-02 15:14 GMT

ಉಡುಪಿ, ಆ.2: ಸರಕಾರದ ಆದೇಶದಂತೆ ಇಂದು ರವಿವಾರ ಅನ್‌ಲಾಕ್ ಆಗಿದ್ದರೂ ಉಡುಪಿ ಜಿಲ್ಲೆಯಾದ್ಯಂತ ವಾಹನ ಹಾಗೂ ಜನ ಸಂಚಾರ ತೀರಾ ವಿರಳವಾಗಿದ್ದರೆ, ನಗರದಲ್ಲಿ ಸಿಟಿ ಬಸ್‌ಗಳ ಸಂಚಾರವನ್ನು ಸಂಪೂರ್ಣ ಸ್ಥಗಿತ ಗೊಂಡಿತ್ತು.

ನಾಲ್ಕು ರವಿವಾರದ ಬಳಿಕ ಮೊದಲ ಬಾರಿಗೆ ಲಾಕ್‌ಡೌನ್ ತೆರವುಗೊಳಿಸಿ ರುವುದರಿಂದ ಉಡುಪಿ ನಗರ, ಕುಂದಾಪುರ, ಕಾರ್ಕಳ, ಕಾಪು, ಬ್ರಹ್ಮಾವರ, ಹೆಬ್ರಿ, ಬೈಂದೂರು ಪೇಟೆಗಳಲ್ಲಿ ಕೆಲವೇ ಕೆಲವು ಅಂಗಡಿಗಳು ಮಾತ್ರ ತೆರೆದಿ ದ್ದವು. ಇದರಿಂದ ವಾಣಿಜ್ಯ ಚಟುವಟಿಕೆಗಳು ತೀರಾ ನೀರಸವಾಗಿರುವುದು ಕಂಡುಬಂತು. ನಗರದ ಹೆಚ್ಚಿನ ಅಂಗಡಿಗಳು ಬಂದ್ ಆಗಿದ್ದವು. ಮೆಡಿಕಲ್, ದಿನಸಿ, ಹೊಟೇಲ್, ಬಟ್ಟೆ ಹಾಗೂ ಆಭರಣ, ಇಲೆಕ್ಟ್ರಾನಿಕ್ ಮಳಿಗೆಗಳು ಮಾತ್ರ ತೆರೆದಿದ್ದವು.

ವಿಕೇಂಡ್ ರಜಾ ದಿನ ಹಾಗೂ ಮಳೆಯ ಕಾರಣ ವಾಹನ ಹಾಗೂ ಜನ ಸಂಚಾರ ತುಂಬಾ ಕಡಿಮೆಯಾಗಿರುವುದು ಕಂಡುಬಂತು. ಬೆಳಗ್ಗೆ ಜನ ಸಂಚಾರ ಸಾಮಾನ್ಯವಾಗಿದ್ದರೂ ಸಂಜೆ ವೇಳೆ ಅಘೋಷಿತ ಲಾಕ್‌ಡೌನ್‌ನಂತೆ ನಗರ ಕಂಡುಬಂತು. ರಿಕ್ಷಾ, ಟ್ಯಾಕ್ಸಿ ಸೇರಿದಂತೆ ಇತರೆ ವಾಹನಗಳು ಓಡಾಟ ನಡೆಸುತ್ತಿದ್ದವು.

ನಗರದಲ್ಲಿ ಉಡುಪಿ- ಕುಂದಾಪುರ, ಉಡುಪಿ- ಮಂಗಳೂರು ಮಾರ್ಗವಾಗಿ ಬೆರಳಣಿಕೆಯ ಖಾಸಗಿ ಬಸ್‌ಗಳು ಮಾತ್ರ ಸಂಚರಿಸಿದವು. ಇತರ ಮಾರ್ಗವಾಗಿ ಸಂಚರಿಸುವ ಲೋಕಲ್ ಬಸ್‌ಗಳು ಮಾತ್ರ ಇಂದು ರಸ್ತೆಗೆ ಇಳಿದಿಲ್ಲ. ಪ್ರಯಾ ಣಿಕರಿಲ್ಲ ಎಂಬ ಕಾರಣಕ್ಕೆ ಬಹುತೇಕ ಬಸ್‌ಗಳು ಓಡಾಟ ನಡೆಸಿಲ್ಲ. ಇದರಿಂದ ಪ್ರಯಾಣಿಕರು ತೀರಾ ತೊಂದರೆ ಅನುಭವಿಸಿದರು. ಆದರೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿದ್ದವು.
ಬಸ್ ಸಂಚಾರಕ್ಕೆ ಅವಕಾಶ ನೀಡಿದ ಆರಂಭದಿಂದ ಉಡುಪಿ ಸಿಟಿ ಬಸ್ ಗಳು ರವಿವಾರ ರಸ್ತೆಗೆ ಇಳಿಯುತ್ತಿರಲಿಲ್ಲ. ಅದನ್ನೇ ಈ ರವಿವಾರ ಕೂಡ ಪಾಲಿಸಿಕೊಂಡು ಬಂದಿದ್ದು, ಇಂದು ಯಾವುದೇ ಸಿಟಿಬಸ್‌ಗಳು ಓಡಾಟ ನಡೆಸಿಲ್ಲ. ಇದರ ಪರಿಣಾಮ ಹೂಡೆ, ಮಲ್ಪೆ, ಮಣಿಪಾಲ ತೆರಳುವವರು ರಿಕ್ಷಾಗಳನ್ನು ಅವಲಂಬಿಸಬೇಕಾಯಿತು.

ಸಂತೆಕಟ್ಟೆ ಸಂತೆ ಮಾಹಿತಿ ಕೊರತೆಯಿಂದ ಶನಿವಾರ ಹಾಗೂ ರವಿವಾರ ಎರಡು ದಿನಗಳ ಕಾಲವೂ ನಡೆಯಿತು. ಜಿಲ್ಲೆಯ ಕಂಟೈನ್‌ಮೆಂಟ್ ವಲಯ ದಲ್ಲಿ ಸಂಪೂರ್ಣ ಲಾಕ್‌ಡೌನ್ ಮುಂದುವರೆದಿದೆ. ಇಲ್ಲಿ ಎಲ್ಲ ರೀತಿಯ ಚಟು ವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News