​ಕಡಿಮೆ ಬೆಲೆ ಚಿನ್ನಾಭರಣ ಕೊಡಿಸುವುದಾಗಿ ನಂಬಿಸಿ 12 ಲಕ್ಷ ರೂ. ವಂಚನೆ: ದೂರು

Update: 2020-08-02 15:16 GMT

ಉಡುಪಿ, ಆ.2: ಕಡಿಮೆ ಬೆಲೆಗೆ ಚಿನ್ನಾಭರಣ ತೆಗೆಸಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಮಠದ ಬೆಟ್ಟು ನಿವಾಸಿ ಉದಯ ಪೂಜಾರಿ ಎಂಬವರ ತಂಗಿಯ ಮದುವೆಗೆ ಹೊಸಪೇಟೆಯ ರಮೇಶ್ ಎಂಬಾತ ತನ್ನ ತಾತನ ಬಳಿ ಇರುವ ಚಿನ್ನಾಭರಣಗಳನ್ನು ಕಡಿಮೆ ದರದಲ್ಲಿ ತೆಗೆಸಿಕೊಡುವುದಾಗಿ ನಂಬಿಸಿದ್ದನು. ಅದರಂತೆ ಉದಯ ಪೂಜಾರಿ ಜು.29ರಂದು 12 ಲಕ್ಷ ರೂ.ವನ್ನು ರಮೇಶ್ ಮತ್ತು ಆತನ ತಾತ ವೆಂಕಪ್ಪ ಪಡೆದುಕೊಂಡು ಹೋಗಿದ್ದರು. ಅದರ ನಂತರ ರಮೇಶ್ ಮೊಬೈಲ್ ನಂಬರನ್ನು ಸ್ವಿಚ್‌ಅಫ್ ಮಾಡಿದ್ದು, ಉದಯ ಪೂಜಾರಿಗೆ ಚಿನ್ನವನ್ನು ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News