ಜಪಾನ್‌ನಲ್ಲಿ ಆತಂಕ ಸೃಷ್ಟಿಸಿರುವ ಸಸ್ಯ ಬೀಜಗಳ ನಿಗೂಢ ಪಾರ್ಸೆಲ್‌ಗಳು

Update: 2020-08-02 17:46 GMT
ಸಾಂದರ್ಭಿಕ ಚಿತ್ರ

 ಟೋಕಿಯೊ,ಆ.2: ನಿಗೂಢವಾದ ಸಸ್ಯಬೀಜಗಳ ಪಾರ್ಸೆಲ್‌ಗಳು ಹಲವಾರು ಜಪಾನಿ ಪ್ರಜೆಗಳಿಗೆ ಬಂದಿರುವುದಾಗಿ ರವಿವಾರ ವರದಿಯಾಗಿದೆ. ಜಪಾನಿ ಪ್ರಜೆಗಳು ಅಪೇಕ್ಷಿಸದಿದ್ದರೂ, ಅವರಿಗೆ ಈ ಪಾರ್ಸೆಲ್‌ಗಳು ಬಂದಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಪಾರ್ಸೆಲ್‌ಗಳು ಚೀನಾದಿಂದ ಬಂದಿರಬೇಕೆಂದು ಶಂಕಿಸಲಾಗಿದೆ.

ಕಳೆದ ಮಂಗಳವಾರದಂದು ಕನಗಾವಾ ನಗರದ ಮಿಯುರಾ ನಗರದ ನಿವಾಸಿಯೊಬ್ಬರಿಗೆ ಚೀನಾದಿಂದ ಸಸ್ಯದ ಬೀಜಗಳ ನಿಗೂಢವಾದ ಪಾರ್ಸೆಲ್ ಬಂದಿರುವುದಾಗಿ ಎನ್‌ಎಚ್‌ಕೆ ಸುದ್ದಿಸಂಸ್ಥೆ ವರದಿ ಮಾಡಿದೆ.

ಜಪಾನ್‌ನಾದ್ಯಂತ ಹಲವರಿಗೆ ಇಂತಹದೇ ಸಸ್ಯಬೀಜಗಳ ಪಾರ್ಸೆಲ್‌ಗಳು ಬಂದಿರುವುದಾಗಿ ಯೊಕೊಹಾಮಾ ನಗರದ ಸಸ್ಯ ತಜ್ಞರು ತಿಳಿಸಿದ್ದಾರೆ.

ಕಳೆದ ಜೂನ್‌ನಿಂದೀಚೆಗೆ ಅಮೆರಿಕ,ಕೆನಡ ಹಾಗೂ ಯುರೋಪ್ ಸೇರಿದಂತೆ ಜಗತ್ತಿನಾದ್ಯಂತ ವಿವಿಧ ದೇಶಗಳಿಗೆ ಅನುಮಾನಾಸ್ಪದ ಸಸ್ಯಬೀಜಗಳ ಪಾರ್ಸೆಲ್‌ಗಳು ಬಂದಿರುವುದಾಗಿ ವರದಿಯಾಗಿವೆ.

ಆದರೆ ಈ ಪಾರ್ಸೆಲ್‌ಗಳಿಗೂ, ಚೀನಾಗೂ ಯಾವುದೇ ಸಂಬಂಧವಿರುವುದನ್ನು ಚೀನಿ ವಿದೇಶಾಂಗ ಸಚಿವಾಲಯ ನಿರಾಕರಿಸಿದೆ. ಪಾರ್ಸೆಲ್‌ಗಳಲ್ಲಿ ಸೂಚಿಸಲಾಗಿರುವ ಅಂಚೆಮಾರ್ಕ್‌ಗಳನ್ನು ಪೋರ್ಜರಿ ಮಾಡಲಾಗಿದೆಯೆಂದು ಅದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News