ಫ್ಲಾರಿಡಾಗೆ ಈಗ ಇಸೈಯಾಸ್ ಚಂಡಮಾರುತದ ಭೀತಿ

Update: 2020-08-02 17:56 GMT

ಮಿಯಾಮಿ,ಆ.2: ಕೊರೋನ ವೈರಸ್ ಸಾಂಕ್ರಾಮಿಕ ವ್ಯಾಪಕವಾಗಿರುವ ಫ್ಲಾರಿಡಾಗೆ ಈಗ ಚಂಡಮಾರುತದ ಭೀತಿ ಎದುರಾಗಿದೆ. ಉಷ್ಣವಲಯದ ಚಂಡಮಾರುತ ಇಸೈಯಾಸ್ ರವಿವಾರ ರಾತ್ರಿಯೊಳಗೆ ಬಲಿಷ್ಠಗೊಳ್ಳಲಿದ್ದು, ಫ್ಲಾರಿಡಾ ಕರಾವಳಿಗೆ ಅಪ್ಪಳಿಸಲಿದೆಯೆಂದು ಅಮೆರಿಕದ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

 ಇಸೈಯಾಸ್ ಚಂಡಮಾರುತ ಪ್ರಬಲವಾಗುತ್ತಿರುವ ಹಿನ್ನೆಲೆಯಲ್ಲಿ ಫ್ಲಾರಿಡಾ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ದಿಢೀರ್ ನೆರೆಯುಂಟಾಗಿದೆ. ಜನರ ಜೀವ ಹಾಗೂ ಸೊತ್ತುಗಳನ್ನು ರಕ್ಷಿಸಲು ಪೂರ್ಣ ಸಿದ್ಧತೆಗಳನ್ನು ಮಾಡಲಾಗಿದೆಯೆಂದು ಅದುಹೇಳಿದೆ.

  ಇಸೈಯಾಸ್ ಚಂಡಮಾರುತ ಫ್ಲಾರಿಜಾದ ಆಗ್ನೇಯದಲ್ಲಿರುವ ಮಿಯಾಮಿ ನಗರದ ಕರಾವಳಿಯೆಡೆಗೆ ಧಾವಿಸುತ್ತಿರುವಂತೆಯೇ, ಭಾರೀ ಗಾಳಿಯು ಗಂಟೆಗೆ 70 ಮೈಲು ವೇಗದಲ್ಲಿ ಬೀಸುತ್ತಿದೆಯೆಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News