ಇಂಟರ್‌ನೆಟ್ ಸ್ಥಗಿತ, ಸಾಂಕ್ರಾಮಿಕದಿಂದ ಕಾಶ್ಮೀರಕ್ಕೆ ಆಗಿರುವ ನಷ್ಟ ಎಷ್ಟು ಗೊತ್ತೇ?

Update: 2020-08-04 04:06 GMT

ಹೊಸದಿಲ್ಲಿ, ಆ.4: ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕಿತ್ತುಹಾಕಿದ ಬಳಿಕ ಕೇಂದ್ರ ಸರ್ಕಾರ ಹೇರಿದ ಇಂಟರ್‌ನೆಟ್ ನಿರ್ಬಂಧ ಹಾಗೂ ಕೋವಿಡ್-19 ಸಾಂಕ್ರಾಮಿಕ ತಡೆಗೆ ಹೇರಿದ ಲಾಕ್‌ಡೌನ್‌ನಿಂದ ಜಮ್ಮು ಕಾಶ್ಮೀರ ಆರ್ಥಿಕತೆಗೆ ಸುಮಾರು 40 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಜಮ್ಮು ಕಾಶ್ಮೀರ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಶೈಖ್ ಆಶಿಕ್ ಅಹ್ಮದ್ ಹೇಳಿದ್ದಾರೆ.

ಪ್ರವಾಸೋದ್ಯ, ಸಾರಿಗೆ ಮತ್ತು ಕರಕುಶಲ ಕಲೆ ಉದ್ಯಮಗಳು ಇಂಟರ್‌ನೆಟ್ ನಿಷೇಧದಿಂದಾಗಿ ತೀವ್ರ ಸಂಕಷ್ಟ ಅನುಭವಿಸಿವೆ ಎಂದು 'ದ ಪ್ರಿಂಟ್' ‌ಜತೆ ಮಾತನಾಡಿದ ಅವರು ಅಭಿಪ್ರಾಯಪಟ್ಟಿದ್ದಾರೆ. ಡಿಸೆಂಬರ್, ಜನವರಿ ವೇಳೆಗೆ ಇವು ಚೇತರಿಕೆ ಹಾದಿಯಲ್ಲಿದ್ದಾಗ ಲಾಕ್‌ಡೌನ್ ಆರಂಭವಾಗಿ ಮತ್ತೆ ವಹಿವಾಟುಗಳನ್ನು ಸ್ಥಗಿತಗೊಂಡವು ಎಂದು ವಿವರಿಸಿದ್ದಾರೆ.

ಇಂಟರ್‌ನೆಟ್ ಮೂಲಭೂತ ಅಗತ್ಯ. ಅದರಿಂದ ನಾವು ವಂಚಿತರಾಗಿದ್ದೇವೆ. ಸಾಂಕ್ರಾಮಿಕದ ವೇಳೆ ಮಕ್ಕಳಿಗೂ ಸಂಕಷ್ಟ ಎದುರಾಗಿದೆ. ನನ್ನ ಮಕ್ಕಳಿಗೂ ಆನ್‌ಲೈನ್ ತರಗತಿಗಳಿದ್ದು, ಕೆಲವೊಮ್ಮೆ 2ಜಿಯಲ್ಲಿ ಕೆಲ ವೀಡಿಯೊ ಚಾಲನೆಯಾಗುತ್ತದೆ ಕೆಲವೊಮ್ಮೆ ಆಗುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ರಫ್ತು ಉದ್ಯಮವಾದ ಕರಕುಶಲ ಕಲೆ ನಿಂತಿರುವುದೇ ಇಂಟರ್‌ನೆಟ್ ಮೇಲೆ ಗ್ರಾಹಕರು ವಾಟ್ಸ್ ಆ್ಯಪ್‌ನಲ್ಲಿ ಖರೀದಿಗೆ ಕಾರ್ಯಾದೇಶ ಕಳುಹಿಸುತ್ತಾರೆ. 2ಜಿಯಲ್ಲಿ ಇವುಗಳನ್ನು ಕಳುಹಿಸುವುದು ಕಷ್ಟಸಾಧ್ಯ ಎಂದು ಹೇಳಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ಕಿತ್ತುಹಾಕುವ ಮುನ್ನಾ ದಿನ ಕಳೆದ ವರ್ಷದ ಆಗಸ್ಟ್ 4ರಂದು ಜಮ್ಮು ಕಾಶ್ಮೀರದಲ್ಲಿ ಇಂಟರ್‌ನೆಟ್ ಸ್ಥಗಿತಗೊಂಡಿತ್ತು. ಸುಪ್ರೀಂಕೋರ್ಟ್ ನಿರ್ದೇಶನದ ಬಳಿಕ ಕಳೆದ ಜನವರಿಯಲ್ಲಿ 2ಜಿ ಸಂಪರ್ಕ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News