ಬ್ಯಾರಿ ಸಾಹಿತ್ಯ ಅಕಾಡಮಿಯ 2019 ಮತ್ತು 2020ನೇ ಸಾಲಿನ ಗೌರವ ಪ್ರಶಸ್ತಿ, ಪುರಸ್ಕಾರ ಪ್ರಕಟ

Update: 2020-08-04 06:35 GMT

ಮಂಗಳೂರು, ಆ.4: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2019 ಮತ್ತು 2020ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಗೌರವ ಪುರಸ್ಕಾರ ಪ್ರಕಟಿಸಲಾಗಿದೆ. ಬ್ಯಾರಿ ಸಾಹಿತ್ಯ, ಕಲಾ ಕ್ಷೇತ್ರ ಹಾಗೂ ಬ್ಯಾರಿ ಸಂಘಟನೆ, ಸಮಾಜಸೇವೆ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಆರು ಮಂದಿ ಗಣ್ಯರನ್ನು ಅಕಾಡಮಿಯ 2019 ಮತ್ತು 2020ರ ಗೌರವ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಅದೇರೀತಿ 2019 ಮತ್ತು 2020ರ ಗೌರವ ಪುರಸ್ಕಾರಕ್ಕೆ ಒಟ್ಟು 10 ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಗೌರವ ಪ್ರಶಸ್ತಿ - 2019
 1. ಬ್ಯಾರಿ ಸಾಹಿತ್ಯ ಕ್ಷೇತ್ರ: ಅಬ್ದುಲ್ ರಹ್ಮಾನ್ ಕುತ್ತೆತ್ತೂರು
2. ಬ್ಯಾರಿ ಕಲೆ ಕ್ಷೇತ್ರ: ಇಸ್ಮಾಯೀಲ್ ತಣ್ಣೀರುಬಾವಿ
3. ಬ್ಯಾರಿ ಸಂಘಟನೆ ಮತ್ತು ಸಮಾಜ ಸೇವೆ ಕ್ಷೇತ್ರ: ಎಂ.ಅಹ್ಮದ್ ಬಾವ ಮೊಹಿದಿನ್

ಗೌರವ ಪ್ರಶಸ್ತಿ 2020
 1. ಬ್ಯಾರಿ ಸಾಹಿತ್ಯ ಕ್ಷೇತ್ರ: ಬಶೀರ್ ಅಹ್ಮದ್ ಕಿನ್ಯ
2. ಬ್ಯಾರಿ ಸಿನಿಮಾ, ನಾಟಕ, ಕಲೆ ಕ್ಷೇತ್ರ: ವೀಣಾ ಮಂಗಳೂರು
3. ಬ್ಯಾರಿ ಸಂಘಟನೆ ಮತ್ತು ಸಮಾಜ ಸೇವೆ ಕ್ಷೇತ್ರ: ಸಿದ್ದೀಕ್ ಮಂಜೇಶ್ವರ
ಗೌರವ ಪ್ರಶಸ್ತಿಯು ರೂ.50,000 ನಗದು, ಶಾಲು, ಹಾರ, ಫಲ ತಾಂಬೂಲ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದವರು ತಿಳಿಸಿದ್ದಾರೆ.

ಗೌರವ ಪುರಸ್ಕಾರ 2019
1. ಬ್ಯಾರಿ ಶಿಕ್ಷಣ ಕ್ಷೇತ್ರ: ಅಬ್ದುಲ್ ರಝಾಕ್ ಅನಂತಾಡಿ
2. ಬ್ಯಾರಿ ಸಾಹಿತ್ಯ ಕ್ಷೇತ್ರ: ಟಿ.ಎಸ್.ಹುಸೈನ್
3. ಬ್ಯಾರಿ ಸಂಯುಕ್ತ ಕ್ಷೇತ್ರ: ಅಬ್ದುಲ್ ಮಜೀದ್ ಸೂರಲ್ಪಾಡಿ
4. ಸಮಾಜ ಸೇವೆ ಕ್ಷೇತ್ರ: ಆಪತ್ಬಾಂಧವ ಆಸಿಫ್ ಕಾರ್ನಾಡು
5. ಬ್ಯಾರಿ ಸಂಘಟನೆ ಕ್ಷೇತ್ರ: ಆಲಿಕುಂಞಿ ಪಾರೆ

ಗೌರವ ಪುರಸ್ಕಾರ 2020
1. ವೈದ್ಯಕೀಯ ಕ್ಷೇತ್ರ: ಡಾ.ಇಸ್ಮಾಯೀಲ್
2. ಬ್ಯಾರಿ ಶಿಕ್ಷಣ ಕ್ಷೇತ್ರ: ಟಿ.ಎ.ಮುಹಮ್ಮದ್ ಆಸಿಫ್
3. ಸಮಾಜ ಸೇವೆ ಕ್ಷೇತ್ರ: ಇಲ್ಯಾಸ್ ಮಂಗಳೂರು
4. ಬ್ಯಾರಿ ಸಂಘಟನೆ ಕ್ಷೇತ್ರ: ರಾಶ್ ಬ್ಯಾರಿ
5. ಬ್ಯಾರಿ ಯುವ ಪ್ರತಿಭೆ: ಸಫ್ವಾನ್ ಶಾ ಬಹರೈನ್

ಸುದ್ದಿಗೋಷ್ಠಿಯಲ್ಲಿ ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News