ಮಂಗಳೂರು: ಭಾರೀ ಗಾಳೆ ಮಳೆ; ಹಾನಿ

Update: 2020-08-04 06:32 GMT

ಮಂಗಳೂರು, ಆ.4: ನಗರ ಮತ್ತು ಹೊರವಲಯದಲ್ಲಿ ಮಂಗಳವಾರ ಭಾರೀ ಗಾಳಿ-ಮಳೆಯಾಗಿದೆ. ಕಳೆದ ರಾತ್ರಿಯಿಡೀ ಮಳೆ ಸುರಿದಿದ್ದು, ಮುಂಜಾನೆಯ ವೇಳೆ ಬಿರುಗಾಳಿ ಬೀಸಿದೆ.

ನಗರದ ಬೋಳೂರಿನಲ್ಲಿ ಒಂದು ಮರ ಮತ್ತು ನಾಲ್ಕು ವಿದ್ಯುತ್ ಕಂಬಗಳು ನೆಲಸಮವಾಗಿದೆ. ಪದವಿನಂಗಡಿಯಲ್ಲಿ ಎರಡು ಮರಗಳು ಉರುಳಿವೆ. ಇದರಿಂದ ಮನೆಯೊಂದಕ್ಕೆ ಹಾನಿಯಾಗಿದೆ.

ಜಿಲ್ಲೆಯ ಜೀವ ನದಿಯಾದ ನೇತ್ರಾವತಿ ನದಿ ನೀರಿನ ಮಟ್ಟವು ಏರಿದೆ. ಆದರೆ ಅಪಾಯದ ಮಟ್ಟ ಮೀರಿಲ್ಲ. ಉಳ್ಳಾಲದಲ್ಲಿ ಬಿರುಗಾಳಿಗೆ ಕಡಲಿನ ಅಬ್ಬರ ಹೆಚ್ಚಾಗಿದೆ.

ಕಳೆದ ವರ್ಷ ಆ.4ಕ್ಕೆ ಜಿಲ್ಲೆಯಲ್ಲಿ 9.0 ಮಿ.ಮೀ. ಮಾತ್ರ ಮಳೆಯಾಗಿದ್ದರೆ, ಈ ಬಾರಿ ಈ ದಿನ 24.7 ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News