ಪುತ್ತೂರು-ಕಡಬ ತಾಲೂಕಿನಲ್ಲಿ 12 ಕೋವಿಡ್ ಪ್ರಕರಣ ದೃಢ

Update: 2020-08-04 09:13 GMT

ಪುತ್ತೂರು, ಆ.4: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಮಂಗಳವಾರ 12 ಕೊರೋನ ಪ್ರಕರಣಗಳು ದೃಢಪಟ್ಟಿವೆ. ಉಭಯ ತಾಲೂಕುಗಳಲ್ಲಿ ಈ ತನಕ ಒಟ್ಟು 313 ಪ್ರಕರಣಗಳು ವರದಿಯಾಗಿದೆ.

ಪುತ್ತೂರು ನಗರಸಭಾ ವ್ಯಾಪ್ತಿಯ ತೆಂಕಿಲ ನಿವಾಸಿ 53 ವರ್ಷದ ಪುರುಷ, ಕಲ್ಲಾರೆ ನಿವಾಸಿ 30 ವರ್ಷದ ಮಹಿಳೆ, ಬನ್ನೂರು ಆನೆಮಜಲು ನಿವಾಸಿ 53 ವರ್ಷದ ಮಹಿಳೆ, ನೆಹರೂ ನಗರ ನಿವಾಸಿ 32 ವರ್ಷದ ಮಹಿಳೆ, ತಾರಿಗುಡ್ಡೆ ನಿವಾಸಿ 34 ವರ್ಷದ ಪುರುಷ, ಪಡೀಲ್ ನಿವಾಸಿ 29 ವರ್ಷದ ಮಹಿಳೆ, ಆರ್ಯಾಪು ಗ್ರಾಮದ ಕುರಿಯ ನಿವಾಸಿ 50 ವರ್ಷದ ಪುರುಷ, ಕೊಡಿಪ್ಪಾಡಿ ಗ್ರಾಮದ ನಿವಾಸಿ 35 ವರ್ಷದ ಪುರುಷ, ಉಪ್ಪಿನಂಗಡಿ ನಿವಾಸಿ 85 ವರ್ಷದ ವೃದ್ಧ, ಕಬಕ ಗ್ರಾಮದ ನಿವಾಸಿಗಳಾದ 70 ವರ್ಷದ ಮಹಿಳೆ ಮತ್ತು 16 ವರ್ಷದ ಬಾಲಕಿಯೊಬ್ಬಳಿಗೆ ಕೊರೋನ ಸೋಂಕು ತಗಲಿರುವುದು ಮಂಗಳವಾರ ದೃಢಪಟ್ಟಿದೆ.

ಕಡಬ ತಾಲೂಕಿನ ಐತ್ತೂರು ಗ್ರಾಮದ ಸುಂಕದಕಟ್ಟೆ ನಿವಾಸಿ 42 ವರ್ಷ ಪ್ರಾಯದ ಮಹಿಳೆಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News