'ವಾಕ್‍ ಸ್ವಾತಂತ್ರ್ಯ’ ಮತ್ತು ‘ನಿಂದನೆ’ ನಡುವೆ ತೆಳು ಗೆರೆ ಇದೆ ಎಂದ ಸುಪ್ರೀಂ ನ್ಯಾಯಪೀಠ

Update: 2020-08-04 10:52 GMT

ಹೊಸದಿಲ್ಲಿ: ವಾಕ್ ಸ್ವಾತಂತ್ರ್ಯ ಮತ್ತು ನಿಂದನೆಯ ನಡುವೆ ತೆಳು ಗೆರೆ ಮಾತ್ರ ಇದೆ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.

ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ವಿರುದ್ಧ 2009ರಲ್ಲಿ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆದ  ಸಂದರ್ಭ ಜಸ್ಟಿಸ್ ಅರುಣ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠ ಮೇಲಿನಂತೆ ಹೇಳಿದೆ.

ಕೋವಿಡ್ ಸಮಸ್ಯೆಯ ಹಿನ್ನೆಲೆಯಲ್ಲಿ ನ್ಯಾಯಾಧೀಶರು ವಾಟ್ಸ್ಯಾಪ್ ವೀಡಿಯೋ ಕಾಲ್ ಮೂಲಕ ಭೂಷಣ್ ಅವರ ವಕೀಲ ರಾಜೀವ್ ಧವನ್, ತೆಹಲ್ಕಾದ ಮಾಜಿ ಸಂಪಾದಕ ತರುಣ್ ತೇಜ್ ಪಾಲ್ ಅವರ ವಕೀಲ ಕಪಿಲ್ ಸಿಬಲ್ ಹಾಗೂ ಪ್ರಕರಣ ದಾಖಲಿಸಿದ್ದ ವಕೀಲ ಹರೀಶ್ ಸಾಳ್ವೆ ಅವರ ವಾದಗಳನ್ನು ಆಲಿಸಿದೆ. ವಾದ ವಿವಾದಗಳ ವೀಡಿಯೋ ಚಿತ್ರೀಕರಣವೂ ನಡೆದಿದೆ.

2009ರಲ್ಲಿ ಭೂಷಣ್ ಅವರು 'ತೆಹಲ್ಕಾ'ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡುತ್ತಾ ಕಳೆದ 16 ಮುಖ್ಯ ನ್ಯಾಯಮೂರ್ತಿಗಳ ಪೈಕಿ ಅರ್ಧದಷ್ಟು ಮಂದಿ ಭ್ರಷ್ಟರು ಎಂದು ಹೇಳಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ನ್ಯಾಯಾಲಯವು ವಾಕ್ ಸ್ವಾತಂತ್ರ್ಯ ಹಾಗೂ ನ್ಯಾಯಾಂಗದ ಘನತೆಯನ್ನು ರಕ್ಷಿಸುವ ಕೆಲಸದ ನಡುವೆ  ಸಮತೋಲನ ಸಾಧಿಸಲು ಯತ್ನಿಸುತ್ತಿದೆ ಎಂದು ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News