×
Ad

ಮಂಗಳೂರು: ತಣ್ಣೀರುಬಾವಿಯಲ್ಲಿ ಸಮುದ್ರ ಪೂಜೆ

Update: 2020-08-04 20:42 IST

ಮಂಗಳೂರು, ಆ.4: ಮೊಗವೀರ ಏಳುಪಟ್ಹ ಸಂಯುಕ್ತ ಸಭಾ ಆಶ್ರಯದಲ್ಲಿ ತಣ್ಣೀರುಬಾವಿಯಲ್ಲಿ ವಾಡಿಕೆಯಂತೆ ನಡೆಯುತಿದ್ದ ಸಮುದ್ರ ಪೂಜೆ ಸೋಮವಾರ ಸರಳ ರೀತಿಯಲ್ಲಿ ನೆರವೇರಿತು.

ಮಂಗಳೂರು ಕದ್ರಿ ಜೋಗಿಮಠದ ಮಠಾಧೀಶ ನಿರ್ಮಲಾನಂದ ಶ್ರೀ ನೇತೃತ್ವದಲ್ಲಿ ಸಮುದ್ರಕ್ಕೆ ಹಾಲು ಎರೆಯುವ ಮೂಲಕ ನಡೆಯಿತು. ಏಳುಪಟ್ಹಕ್ಕೆ ಸಂಯುಕ್ತ ಸಭಾ ಅಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್, ಕಾರ್ಯದರ್ಶಿ ಶಾಮಸುಂದರ್ ಕಾಂಚನ್, ಜತೆ ಕಾರ್ಯದರ್ಶಿ ಗಂಗಾಧರ್ ಶ್ರೀಯಾನ್, ಕೋಶಾಧಿಕಾರಿ ರಂಜನ್ ಕಾಂಚನ್, ನಾರಾಯಣ ಕೋಟ್ಯಾನ್, ಜಪ್ಪು, ಬೋಳಾರ, ಹೊಯ್ಗೆಬಝಾರ್, ನೀರೇಶಾಲ್ಯ, ಕುದ್ರೋಳಿ ಬೊಕ್ಕಪಟ್ಣ, ಬೋಳೂರು ಗ್ರಾಮಸಭೆಗಳ ಗುರಿಕಾರರು, ಅಧ್ಯಕ್ಷರು ಪ್ರತಿನಿಧಿಗಳು ಉಪಸ್ಥಿತರಿ ದ್ದರು. ಒಂಬತ್ತು ಗ್ರಾಮಗಳ ಮೀನುಗಾರರು ಸಮುದ್ರಕ್ಕೆ ಹಾಲು, ತೆಂಗಿನಕಾಯಿ, ಹೂ, ಹಣ್ಣು-ಹಂಪಲು ಇತ್ಯಾದಿ ಅರ್ಪಿಸಿ ಪುನೀತರಾದರು.

ತಣ್ಣೀರುಬಾವಿ ಕೈರಂಪಣಿ ಫಂಡ್: ತಣ್ಣೀರುಬಾವಿ ಕೈರಂಪಣಿ ಫಂಡ್ ವತಿಯಿಂದ ಸಮುದ್ರ ಪೂಜೆಯನ್ನು ತಣ್ಣೀರುಬಾವಿ ಬೀಚ್‌ನಲ್ಲಿ ನೆರವೇರಿಸ ಲಾಯಿತು. ಪಣಂಬೂರು ಠಾಣೆ ಎಎಸ್‌ಐ ಕೃಷ್ಣ, ಸಂಸ್ಥೆಯ ಜೀವನ್ ತಣ್ಣೀರುಬಾವಿ, ವಿನೀತ್, ನಿತಿನ್, ರಂಜಿತ್, ಮಣಿಕಂಠ ಮೊದಲಾದವರು ಉಪಸ್ಥಿತರಿದ್ದರು. ಪೂಜಾವಿಧಿ ನೇತೃತ್ವವನ್ನು ವಿಶ್ವನಾಥ್ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News