ಬೆಳ್ತಂಗಡಿ ತಾಲೂಕಿನಲ್ಲಿ 33 ಮಂದಿಗೆ ಕೊರೋನ ಸೋಂಕು

Update: 2020-08-04 15:55 GMT

ಬೆಳ್ತಂಗಡಿ: ತಾಲೂಕಿನಲ್ಲಿ ಮಂಗಳವಾರ ಒಂದೇ ದಿನ 33 ಮಂದಿಗೆ ಕೊರೋನ ಸೋಂಕು ದೃಢವಾಗಿದೆ. ಓರ್ವ ವ್ಯಕ್ತಿ ಕೊರೋನದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ತಾಲೂಕಿನಲ್ಲಿ ಕೊರೋನ ತೀವ್ರವಾಗಿ ಹರಡುತ್ತಿದ್ದು ಜನರಲ್ಲಿ ಭಯ ಮೂಡಲು ಕಾರಣವಾಗಿದೆ. ಅಳದಂಗಡಿ ಸಮೀಪದ ವ್ಯಕ್ತಿಯೋರ್ವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇಳಂತಿಲ ಪಾಂಡಿಬೆಟ್ಟು ಮಹಿಳೆ, ಲಾಯಿಲಾ ಹೊಳೆಬದಿ ಮಹಿಳೆ, ಮಡಂತ್ಯಾರಿನ ಪುರುಷ, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಮಹಿಳೆ, ಧರ್ಮಸ್ಥಳ ಅಶೋಕನಗರದ ಪುರುಷ, ಧರ್ಮಸ್ಥಳ ಮಿಥಿಲಾ ನಗರದ ಏಳು ಪುರುಷರು, ಓರ್ವ ಮಹಿಳೆ, ಉಜಿರೆ ಪುರುಷ, ಬಾರ್ಯ ಪುರುಷ, ಧರ್ಮಸ್ಥಳದ 10 ವರ್ಷದ ಬಾಲಕ, ಕೇಂಕನಾಜೆ ಐದು ವರ್ಷದ ಹೆಣ್ಣು ಮಗು, ಧರ್ಮಸ್ಥಳದ ಒಂಭತ್ತು ಪುರುಷರು, ಐವರು ಮಹಿಳೆಯರು, ಧರ್ಮಸ್ಥಳ ಅಂಟಮಜಾಲು ಮಹಿಳೆ, ದರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಿಳೆಗೂ ಸೋಂಕು ದೃಢವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News