ಬ್ಯಾರಿ ಹಿರಿಯ ಸಾಧಕರ ಡಿಜಿಟಲೀಕರಣ ಯೋಜನೆಗೆ ಹೆಸರು ಆಹ್ವಾನ

Update: 2020-08-04 16:47 GMT

ಮಂಗಳೂರು, ಆ.4: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಬ್ಯಾರಿ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ಇತಿಹಾಸ ಇವುಗಳನ್ನು ದಾಖಲೀಕರಿಸುವ ಸಲುವಾಗಿ ಹಾಲಿ/ಬದುಕಿರುವ 60 ವರ್ಷಕ್ಕಿಂತ ಮೇಲ್ಪಟ್ಟ ಆಯ್ದ ಬ್ಯಾರಿ ಹಿರಿಯ ಸಾಧಕರ ‘ಡಿಜಿಟಲೀಕರಣ/ದಾಖಲೀಕರಣ’ ಮಾಡಲು ನಿರ್ಧರಿಸಲಾಗಿದೆ.

ಸಾರ್ವಜನಿಕರು ತಮಗೆ ತಿಳಿದಿರುವ 60 ವರ್ಷಕ್ಕಿಂತ ಮೇಲ್ಪಟ್ಟ ಬ್ಯಾರಿ ಕಲೆ, ಸಂಸ್ಕೃತಿ, ಸಾಹಿತ್ಯ, ಜಾನಪದ, ಶಿಕ್ಷಣ, ಮನೆಮದ್ದು, ಪ್ರಸೂತಿ, ಸಮಾಜಸೇವೆ, ಬ್ಯಾರಿ ಆಂದೋಲನ ಮುಂತಾದ ಕ್ಷೇತ್ರಗಳಲ್ಲಿ ಸಾಧನೆಗೈದ ಬ್ಯಾರಿ ಹಿರಿಯ ಸಾಧಕ-ಸಾಧಕಿಯರ ಹೆಸರುಗಳನ್ನು ಅಕಾಡಮಿಯ ವಾಟ್ಸ್‌ಆ್ಯಪ್ ಸಂಖ್ಯೆ: 7483946578 ಅಥವಾ ಅಕಾಡೆುಯ ಇ-ಮೇಲ್ ಗೆ ಕಳುಹಿಸಬಹುದು ಎಂದು ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News