1ರಿಂದ 5ನೇ ತರಗತಿವರೆಗೆ ಬ್ಯಾರಿ ಮಾತೃ ಭಾಷಿಗರಿಗೆ ಬ್ಯಾರಿ ಭಾಷೆಯಲ್ಲೇ ಶಿಕ್ಷಣ ನೀಡಲು ಮನವಿ

Update: 2020-08-04 16:48 GMT

ಮಂಗಳೂರು, ಆ.4: ಕೇಂದ್ರ ಸರಕಾರವು ಹೊಸ ಶಿಕ್ಷಣ ನೀತಿಯನ್ನು ಪ್ರಕಟಿಸಿದ ಮೇರೆಗೆ 1ರಿಂದ 5ನೇ ತರಗತಿ ತನಕ ಮಕ್ಕಳು ಮಾತೃ ಭಾಷೆಯಲ್ಲೇ ಶಿಕ್ಷಣ ಪಡೆಯಲು ಅವಕಾಶವಿದೆ. ಅದರಂತೆ ಕರ್ನಾಟಕ ರಾಜ್ಯದಾದ್ಯಂತ ಬ್ಯಾರಿ ಭಾಷಿಗ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರದ ಆದೇಶದಂತೆ ಬ್ಯಾರಿ ಭಾಷೆಯಲ್ಲೇ ಶಿಕ್ಷಣ ಕಲಿಯಲು ಅವಕಾಶ ಕಲ್ಪಿಸಬೇಕು ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಮನವಿ ಮಾಡಿದ್ದಾರೆ.

ಈಗಾಗಲೇ ತೃತೀಯ ಭಾಷೆಯಾಗಿ ತುಳು, ಕೊಂಕಣಿ, ಅರಬಿಕ್, ಉರ್ದು ಮುಂತಾದ ಭಾಷೆಗಳು ಕರ್ನಾಟಕದ ವಿವಿಧ ಶಾಲೆಗಳಲ್ಲಿ ಸ್ಥಾನ ವನ್ನು ಪಡೆದುಕೊಂಡಿದೆ. ಬ್ಯಾರಿ ಭಾಷೆಯನ್ನು ತೃತೀಯ ಭಾಷೆಯಾಗಿ ಪರಿಗಣಿಸಬೇಕೆಂಬ ಬೇಡಿಕೆಯನ್ನು ಬ್ಯಾರಿ ಅಕಾಡಮಿ ಈಗಾಗಲೇ ಸರಕಾರದ ಗಮನಕ್ಕೆ ತಂದಿದೆ. ಶಿಕ್ಷಣ ಇಲಾಖೆಯು ಈ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಬ್ಯಾರಿ ಭಾಷಾ ವಲಯದಿಂದ ಇದಕ್ಕೆ ಈಗಾಗಲೇ ಅತ್ಯುತ್ತಮ ಸ್ಪಂದನೆಯೂ ಸಿಕ್ಕಿದೆ. ಇದೀಗ ಕೇಂದ್ರ ಸರಕಾರದ ಈ ನಿಲುನಿಂದ ಅಳಿವಿನಂಚಿನತ್ತ ಸಾಗುತ್ತಿರುವ ಭಾಷೆಗಳಲ್ಲಿ ಒಂದಾದ ಬ್ಯಾರಿ ಭಾಷೆಗೆ ತಳಮಟ್ಟದಿಂದಲೇ ಭದ್ರ ಬುನಾದಿ ಹಾಗೂ ಕಾಯಕಲ್ಪಒದಗಿಸಿದಂತಾಗಿದೆ. ಕೇಂದ್ರ ಸರಕಾರದ ಸೂಚನೆಯಂತೆ 1ರಿಂದ 5ನೇ ತರಗತಿ ತನಕ ಬ್ಯಾರಿ ಭಾಷಿಗರಿಗೆ ಬ್ಯಾರಿ ಮಾತೃ ಭಾಷೆಯಲ್ಲೇ ಶಿಕ್ಷಣವನ್ನು ಕೊಡಿಸುವ ಬಗ್ಗೆ ಆದೇಶ ಹೊರಡಿಸಬೇಕು ಎಂದು ಶಿಕ್ಷಣ ಸಚಿವರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News