ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿಗೆ ಹೆಸರು ಆಹ್ವಾನ

Update: 2020-08-04 16:52 GMT

ಮಂಗಳೂರು, ಆ.4: ನಾಡು, ನುಡಿ, ಭಾಷೆ, ಸಮುದಾಯ ಮತ್ತು ಸಮಾಜದ ಒಳಿತು ಹಾಗೂ ಪ್ರಗತಿಗಾಗಿ ಯಾವುದೇ ರೀತಿಯ ಪ್ರತಿಫಲಾ ಪೇಕ್ಷೆಯಿಲ್ಲದೆ ಪ್ರಶಸ್ತಿ, ಪುರಸ್ಕಾರಗಳ ಆಗ್ರಹವಿಲ್ಲದೆ ಶ್ರಮಿಸುತ್ತಿರುವ ವ್ಯಕ್ತಿಯೊಬ್ಬರಿಗೆ ‘ಯುನಿವೆಫ್ ಕರ್ನಾಟಕ’ ಪ್ರತಿ ವರ್ಷ 5,000 ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡ ‘ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ’ ಯನ್ನು ನೀಡಿ ಗೌರವಿಸುತ್ತಿದೆ.

ಪ್ರಶಸ್ತಿಗೆ ಅರ್ಹರಾದ ವ್ಯಕ್ತಿ ಯಾವುದೇ ಸಂಘಟನೆಯ ಸದಸ್ಯನಾಗಿರಬಾರದು. ಅರ್ಹ ವ್ಯಕ್ತಿ ಸ್ವತಃ ಈ ಪ್ರಶಸ್ತಿಗೆ ಅರ್ಜಿ ಹಾಕುವಂತಿಲ್ಲ. ಅದರಂತೆ 2020ನೇ ಸಾಲಿನ ಪ್ರಶಸ್ತಿಗಾಗಿ ದ.ಕ. ಜಿಲ್ಲೆಯ ಮುಸ್ಲಿಮ್ ಸಮುದಾಯದ ಇಂತಹ ವ್ಯಕ್ತಿಗಳ ಪರಿಚಯವಿರುವವರು ಆ.8ರೊಳಗೆ ಸಂಸ್ಥೆಯ (ಮೊ.ಸಂ: 9945913824) ಗಮನಕ್ಕೆ ಅಥವಾ ದಾರುಲ್ ಇಲ್ಮ್, ಒಂದನೇ ಮಹಡಿ, ಲುಲು ಸೆಂಟರ್, ಇಂದಿರಾ ಆಸ್ಪತ್ರೆ ಬಳಿ, ಫಳ್ನೀರ್, ಮಂಗಳೂರು - 575 001 ಕ್ಕೆ ಸಲ್ಲಿಸಬಹುದಾಗಿದೆ ಎಂದು ಯುನಿವೆಫ್ ಕರ್ನಾಟಕದ ಕಾರ್ಯದರ್ಶಿ ಮುಹಮ್ಮದ್ ಸೈಫುದ್ದೀನ್ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News