ದೇವಸ್ಥಾನ, ಮನೆಗಳಲ್ಲಿ ವಿಶೇಷ ಪೂಜೆಗೆ ಸಚಿವ ಕೋಟ ಮನವಿ

Update: 2020-08-04 16:53 GMT

ಮಂಗಳೂರು, ಆ.5: ಅಯೋಧ್ಯೆಯಲ್ಲಿ ಆ. 5 ರಂದು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿರುವ ಸಂದರ್ಭದಲ್ಲಿ ಏಕಕಾಲದಲ್ಲಿ ದೇವಸ್ಥಾನ ಹಾಗೂ ಮನೆಗಳಲ್ಲಿ ಮಂದಿರ ನಿರ್ವಿಘ್ನವಾಗಿ ನಿರ್ಮಾಣವಾಗುವಂತೆ ಪ್ರಾರ್ಥನೆ, ಪೂಜೆ ಸಲ್ಲಿಸಲು ರಾಜ್ಯ ಮುಜರಾಯಿ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಯೋಧ್ಯೆಯ ರಾಮಜನ್ಮ ಭೂಮಿ ಸ್ಥಳದಲ್ಲಿ ಭವ್ಯವಾದ ಶ್ರೀರಾಮ ದೇಗುಲಕ್ಕೆ ಭೂಮಿ ಪೂಜೆ ನಡೆಯಲಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಕೊಟ್ಟಿರುವ ಸೂಚನೆಯಂತೆ ಎಲ್ಲಾ ಖಾಸಗಿ ಹಾಗೂ ಧಾರ್ಮಿಕ ದತ್ತಿ ಇಲಾಖೆಗೊಳಪಡುವ ದೇವಸ್ಥಾನಗಳಲ್ಲಿ ಶ್ರೀರಾಮ ದೇವಸ್ಥಾನದ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವಂತೆ ಏಕಕಾಲದಲ್ಲಿ ಪೂಜೆ ಮತ್ತು ಪಾ್ರರ್ಥನೆ ಮಾಡಬೇಕೆಂಬ ಸಲಹೆಗಳಿವೆ. ಇಡೀ ರಾಜ್ಯದಲ್ಲಿ ದೇವಾಲಯಗಳಲ್ಲಿ ಮಾತ್ರವಲ್ಲದೆ ಮನೆಗಳಲ್ಲಿಯೂ ಸಾರ್ವಜನಿಕರು ಕೂಡಾ ಒಂದಾಗಿ ಶ್ರೀರಾಮ ದೇವಾಲಯ ನಿರ್ಮಾಣ ಮಂಗಳಕರವಾಗಿ ನಡೆಯಲು ಪ್ರಾರ್ಥಿಸುವಂತೆ ಅವರು ವೀಡಿಯೊ ಮೂಲಕ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News