ಎಸ್‌ಪಿ ಬಾಲಸುಬ್ರಹ್ಮಣ್ಯಂಗೆ ಕೊರೋನ ಸೋಂಕು ದೃಢ

Update: 2020-08-05 09:55 GMT

ಹೊಸದಿಲ್ಲಿ, ಆ.5: ಖ್ಯಾತ ಗಾಯಕ ಹಾಗೂ ನಟ ಎಸ್.ಪಿ. ಬಾಲಸುಬ್ರಹ್ಮಣ್ಯಂಗೆ ಕೊರೋನ ವೈರಸ್ ತಗಲಿದೆ. ಬುಧವಾರ ಫೇಸ್‌ಬುಕ್ ಮುಖಾಂತರ ಎಸ್.ಪಿ. ಈ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

   ಎಸ್.ಪಿ. ಅವರಿಗೆ ಕೋವಿಡ್‌ನ ಲಘು ಲಕ್ಷಣ ಕಾಣಿಸಿಕೊಂಡಿತ್ತು.

ವೀಡಿಯೊವೊಂದನ್ನು ಹಂಚಿಕೊಂಡಿರುವ ಎಸ್.ಪಿ.  ಬಾಲಸುಬ್ರಹ್ಮಣ್ಯಂ ಅವರು, "ನನ್ನ ಆರೋಗ್ಯದ ಕುರಿತು ಜನರು ಚಿಂತಿತರಾಗುವುದು ಬೇಡ. ಕಳೆದ 2-3 ದಿನಗಳಿಂದ ನನಗೆ ಆರೋಗ್ಯ ಸರಿಯಿರಲಿಲ್ಲ. ನನಗೆ ಕಫ, ಶೀತ ಹಾಗೂ ಜ್ವರ ಇತ್ತು. ಈ ಮೂರು ಸಮಸ್ಯೆ ಹೊರತುಪಡಿಸಿ ಬೇರೇನೂ ತೊಂದರೆ ಇಲ್ಲ. ನಾನು ಇದನ್ನು ಹಗುರವಾಗಿ ತೆಗೆದುಕೊಳ್ಳಲು ಬಯಸುವುದಿಲ್ಲ. ನಾನು ತಪಾಸಣೆ ನಡೆಸಲು ಆಸ್ಪತ್ರೆಗೆ ತೆರಳಿದ್ದೇನೆ. ನನ್ನಲ್ಲಿ ಲಘು ಪ್ರಮಾಣದ ಕೊರೋನ ಇದೆ ಎಂದು ವೈದ್ಯರು ಹೇಳಿದ್ದಾರೆ. ನಾನು ಮನೆಯಲ್ಲೇ ಇದ್ದು, ಸ್ವಯಂ ಕ್ವಾರಂಟೈನ್‌ನಲ್ಲಿದ್ದೇನೆ'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News