ಮನೆ ಮೇಲೆ ಬಿದ್ದ ಮರ : ಎಪಿಎಂಸಿ ನಿರ್ಲಕ್ಷ್ಯ ಆರೋಪ

Update: 2020-08-05 12:01 GMT

ಬೈಕಂಪಾಡಿ : ಎಪಿಎಂಸಿ ಆವರಣದಲ್ಲಿರುವ ಅಪಾಯಕಾರಿಯಾದ ಮರವನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದರೂ, ತೆರವುಗೊಳಿಸದೇ ಮಂಗಳವಾರ ರಾತ್ರಿ ಬಂದ ತೀವ್ರ ಬಿರುಗಾಳಿಗೆ ಮರ ಬಿದ್ದು, ಮನೆ ಜಖಂಗೊಂಡ ಘಟನೆ ನಡೆದಿದೆ.

ಬೈಕಂಪಾಡಿ ಎಪಿಎಂಸಿ ಪಕ್ಕದಲ್ಲಿ ಅಂಗರಗುಂಡಿ ಪ್ರದೇಶ ಇದ್ದು, ಎಪಿಎಂಸಿಯ ಕೊನೆಯಲ್ಲಿರುವ ಅಪಾಯಕಾರಿಯಾದ ಮರಗಳನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಮನವಿ ಸಲ್ಲಿಸಿದ್ದರು.

ಸಣ್ಣ ಪುಟ್ಟ ಮರಗಳನ್ನು ತೆರವುಗೊಳಿಸಲಾಗಿದ್ದು, ದೊಡ್ಡ ಮರಗಳನ್ನು ಹಾಗೆಯೇ ಉಳಿಸಲಾಗಿತ್ತು. ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿಗೆ ಇಲ್ಲಿನ ಬೃಹತ್ ಮರವೊಂದು ಉರುಳಿ, ಪಕ್ಕದಲ್ಲೇ ಇರುವ ಮನೆಗಳ ಮೇಲೆ ಬಿದ್ದಿದೆ. ಇದರಿಂದ ಹಸನಬ್ಬ ಎಂಬವರ ಮನೆ ಜಖಂ ಆಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರಿಗೆ ಯಾವುದೇ ಜೀವಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. 

ಎಪಿಎಂಸಿಯ ತಡೆಗೋಡೆ ಪಕ್ಕದಲ್ಲಿ ಹಲವು ಮನೆಗಳಿವೆ. ಇಲ್ಲಿ ರಾಜಾ ಕಾಲುವೆಯೂ ಪಕ್ಕದಲ್ಲೇ ಹರಿಯುತ್ತಿದ್ದು,  ಪ್ರತೀವರ್ಷ ಇಲ್ಲಿ ಮರ ಬೀಳುವುದು, ಕಾಂಪೌಂಡ್ ಕುಸಿಯುವುದು, ಮಳೆ ನೀರು ಮನೆಗೆ ನುಗ್ಗುವುದು ಮತ್ತಿತರ ಘಟನೆಗಳು ನಡೆದು ಮಳೆಗಾಲದಲ್ಲಿ ಆತಂಕದಲ್ಲೇ ಜೀವಿಸುವಂತಾಗಿದೆ ಎಂದು ಸ್ಥಳೀಯ ನಿವಾಸಿ ಅಝರುದ್ದೀನ್ ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News