ಮಂದಿರ ಶಿಲಾನ್ಯಾಸದ ದಿನವೇ ಟ್ವಿಟರ್ ನಲ್ಲಿ ಟ್ರೆಂಡ್ ಆದ 'ತಮಿಳರ ದೊರೆ ರಾವಣ'

Update: 2020-08-05 15:21 GMT

ಹೊಸದಿಲ್ಲಿ, ಆ.5: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಆಗಮಿಸಿದ ಕ್ಷಣದಿಂದಲೇ ರಾಮನ ಬದ್ಧವೈರಿ ಎಂದೇ ಪರಿಗಣಿಸಲ್ಪಟ್ಟ ರಾವಣನ ಬಗ್ಗೆ ತಮಿಳು ಟ್ವಿಟರ್‌ನಲ್ಲಿ ಬಿರುಸಿನ ಚರ್ಚೆ ಆರಂಭವಾಗಿದೆ.

ಟ್ವಿಟರ್‌ನಲ್ಲಿ 'ಲ್ಯಾಂಡ್ ಆಫ್ ರಾವಣ, ತಮಿಳರ ಹೆಮ್ಮೆ ರಾವಣ' ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ.

 ಬುಧವಾರ ಬೆಳಿಗ್ಗೆ 'ತಮಿಳು ದೊರೆ ರಾವಣನ್' ಎಂದು ತಮಿಳು ಭಾಷೆಯ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಕಾಣಿಸುವುದರೊಂದಿಗೆ ಈ ಸರಣಿ ಟ್ವೀಟ್‌ಗಳು ಆರಂಭವಾದವು. ರಾವಣ ಶೈವರ ದೊರೆ ಎಂದು ಕೆಲವರು ಹೇಳಿದರೆ, ಈತನನ್ನು ಸಿಂಹಳೀಯರು ದೇವರೆಂದು ಪೂಜಿಸುತ್ತಾರೆ ಎಂದು ಇನ್ನು ಕೆಲವರು ಪ್ರತಿಕ್ರಿಯಿಸಿದರು. ಈತ ಬ್ರಾಹ್ಮಣ ಎಂದೂ ಕೆಲವರು ಟ್ವೀಟ್ ಮಾಡಿದರು. ತಮಿಳುನಾಡಿನಲ್ಲಿ ಶೀಘ್ರ ರಾವಣ ದೇಗುಲ ನಿರ್ಮಿಸಲಾಗುವುದು. ರಾವಣ ತಮಿಳುನಾಡಿಗಷ್ಟೇ ಅಲ್ಲ, ಭೂಮಂಡಲಕ್ಕೇ ಹೆಮ್ಮೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

‘ರಾಮಾಯಣವು ಜನಾಂಗೀಯ ಮಹಾಕಾವ್ಯವಾಗಿದ್ದು ಇದು ತಮಿಳರು ಮತ್ತು ದಕ್ಷಿಣ ಭಾರತದ ಜನರನ್ನು ತುಚ್ಛ, ನೀಚ, ಕ್ರೂರ, ರಾಕ್ಷಸರು ಮತ್ತು ಕೋತಿಗಳೆಂದು ಚಿತ್ರಿಸಿದೆ. ರಾಮನು ನಮ್ಮ ದೇವರಲ್ಲ, ಆದರೆ ರಾವಣ ನಮ್ಮ ಚಕ್ರವರ್ತಿ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News