‘ಕಾನೂನುಬಾಹಿರವಾಗಿ ಇಟ್ಟ ವಿಗ್ರಹ ಹೇಗೆ ದೇವರಾಯಿತು ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಉತ್ತರಿಸಿಲ್ಲ’

Update: 2020-08-05 16:30 GMT

ಹೊಸದಿಲ್ಲಿ, ಅ.5: ಬಾಬರಿ ಮಸೀದಿಯನ್ನು ಕಾನೂನು ಬಾಹಿರವಾಗಿ ಕೆಡವಲಾಯಿತು ಹಾಗೂ ಅದು ಯಾವಾಗಲೂ ಮಸೀದಿಯಾಗಿಯೇ ಉಳಿಯಲಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ)ಯ ಕಾರ್ಯದರ್ಶಿ ಹಾಗೂ ಬಾಬರಿ ಮಸೀದಿ ಕ್ರಿಯಾ ಸಮಿತಿಯ ಸಂಚಾಲಕರಾಗಿದ್ದ ಝಫರ್ಯಾಬ್ ಜೀಲಾನಿ ಹೇಳಿದ್ದಾರೆ.

outlookindia.com ಜೊತೆ ಮಾತನಾಡಿದ ಅವರು, ಬಾಬರಿ ಮಸೀದಿಯನ್ನು ಕಾನೂನುಬಾಹಿರವಾಗಿ ನೆಲಸಮ ಮಾಡಲಾಗಿದೆ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಇದರಿಂದಾಗಿ ಸುಪ್ರೀಂ ಕೋರ್ಟ್ ತೀರ್ಪು ಕುರಿತು ಅಖಿಲ ಭಾರತ ಮುಸ್ಲಿಂ ವೈಯುಕ್ತಿ ಕಾನೂನು ಮಂಡಳಿಗೆ ಅಸಮಾಧಾನ ಇದೆ ಎಂದರು.

‘‘ಬಾಬರಿ ಮಸೀದಿ ಧ್ವಂಸ ದೇಶದ ನಾಚಿಕೆಗೇಡಿನ ಕೆಲಸ ಎಂದು 1994ರಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು’’ ಎಂದು ಅವರು ತಿಳಿಸಿದ್ದಾರೆ.

ನೆಲದ ಕಾನೂನಿಗೆ ಮುಸ್ಲಿಂ ಸಮುದಾಯ ಮನ್ನಣೆ ನೀಡುತ್ತದೆ. ಸುಪ್ರೀಂ ಕೋರ್ಟ್ ತಪ್ಪಾಗಿಯೋ, ಸರಿಯಾಗಿಯೋ ವಿಗ್ರಹದ ಪರವಾಗಿ ತೀರ್ಪು ನೀಡಿದೆ. ಆದರೆ, ಕಾನೂನು ಬಾಹಿರವಾಗಿ ಇರಿಸಲಾದ ವಿಗ್ರಹ ಹೇಗೆ ದೇವರಾಯಿತು? ಎಂಬ ಪ್ರಶ್ನೆ ಬಗ್ಗೆ ಸುಪ್ರೀಂ ಕೋರ್ಟ್ ಉತ್ತರ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

ಅಯೋಧ್ಯೆ ರಾಮನ ಜನ್ಮ ಭೂಮಿ ಎಂದು ಚಾರಿತ್ರಿಕವಾಗಿ ಸಾಬೀತು ಮಾಲು ಸಾಧ್ಯವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಹೇಳಿದೆ ಎಂದು ಜಿಲಾನಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News