ಮಾಣಿ, ಪಿಕ್‌ಅಪ್ ಡ್ಯಾಮ್ ಭರ್ತಿ: ವಾರಾಹಿ/ಹಾಲಾಡಿ ವಾಸಿಗಳಿಗೆ ಎಚ್ಚರಿಕೆ

Update: 2020-08-05 16:32 GMT

ಉಡುಪಿ, ಆ.5: ವಾರಾಹಿ ಜಲವಿದ್ಯುತ್ ಯೋಜನೆಯ ಹೊಸನಗರ ತಾಲೂಕು ಮಾಸ್ತಿಕಟ್ಟೆಯಲ್ಲಿರುವ ಮಾಣಿ ಹಾಗೂ ಪಿಕ್‌ಅಪ್ ಜಲಾನಯನ ಪ್ರದೇಶಗಳಲ್ಲಿ ಕಳೆದೆ ಕೆಲವು ದಿನಗಳಿಂದ ಸತತವಾಗಿ ಮಳೆಯಾಗುತ್ತಿರುವು ದರಿಂದ ಜಲಾಶಯಗಳಿಗೆ ಹೇರಳವಾಗಿ ನೀರು ಹರಿದು ಬರುತಿದ್ದು, ಪಿಕ್‌ಅಪ್ ಜಲಾಶಯದಲ್ಲಿ ನೀರಿ ಮಟ್ಟ ಒಂದೇ ಸಮನೆ ಏರುತ್ತಿದೆ.

ಮಂಗಳವಾರ ಸಂಜೆಯ ವೇಳೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಪಿಕ್‌ಅಪ್ ಅಣೆಕಟ್ಟಿನಲ್ಲಿ ಶೇ.93ರಷ್ಟು ಭರ್ತಿಯಾಗಿದೆ. ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಒಳಹರಿವು ಇದೇ ಪ್ರಮಾಣದಲ್ಲಿ ಮುಂದುವರಿದರೆ ಜಲಾಶಯವು ಶೀಘ್ರ ಗರಿಷ್ಟ ಮಟ್ಟವನ್ನು ಮುಟ್ಟುವ ಸಾಧ್ಯತೆ ಇದೆ.

ಆದ್ದರಿಂದ ಅಣೆಕಟ್ಟಿನ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚುವರಿಯಾದ ಜಲಾಶಯದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುವುದು. ಹೀಗಾಗಿ ಅಣೆಕಟ್ಟಿನ ಕೆಳದಂಡೆಯಲ್ಲಿ ಹಾಗೂ ವಾರಾಹಿ/ಹಾಲಾಡಿ ನದಿಯ ಪಾತ್ರದ್ದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ಇತ್ಯಾದಿಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಬೇಕೆಂದು ಕರ್ನಾಟಕ ವಿದ್ಯುತ್ ನಿಗಮದ ಪರವಾಗಿ ಕಾರ್ಯನಿರ್ವಾಹಕ ಅಭಿಯಂತರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News