ಫಕ್ರುದ್ದೀನ್ ಇರುವೈಲ್‌ರ ನೆನಪು ಕಾರ್ಯಕ್ರಮ

Update: 2020-08-05 17:23 GMT

ಮಂಗಳೂರು, ಆ.5: ಹಿರಿಯ ಕಥೆಗಾರ ದಿ. ಫಕ್ರುದ್ದೀನ್ ಇರುವೈಲು ಅವರನ್ನು ನೆನಪಿಸುವ ಕಾರ್ಯಕ್ರಮವು ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ ‘ಮೇಲ್ತೆನೆ’ಯ ವತಿಯಿಂದ ಮಂಗಳವಾರ ಮುಸ್ಸಂಜೆ ದೇರಳಕಟ್ಟೆಯಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೇಲ್ತೆನೆಯ ಅಧ್ಯಕ್ಷ ಟಿ. ಇಸ್ಮಾಯಿಲ್ ಮಾಸ್ಟರ್ ದುಆಗೈದರು. ಫಕ್ರುದ್ದೀನ್ ಇರುವೈಲು ಅವರೊಂದಿಗಿನ ಒಡನಾಟದ ಬಗ್ಗೆ ಕಥೆಗಾರ ಹಂಝ ಮಲಾರ್ ಮತ್ತು ಮೇಲ್ತೆನೆ ಬ್ಲಾಗ್‌ನ ಸಂಪಾದಕ ಇಸ್ಮತ್ ಪಜೀರ್ ಮಾತನಾಡಿದರು.
ಈ ಸಂದರ್ಭ ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಬಶೀರ್ ಕಲ್ಕಟ್ಟ, ಬಾಷಾ ನಾಟೆಕಲ್, ಖಲೀಲ್ ಕಲ್ಲಾಪು, ಅಶೀರುದ್ದೀನ್ ಆಲಿಯಾ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ರಫೀಕ್ ಕಲ್ಕಟ್ಟ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News