ಅ.10: ದೇಶ ಉಳಿಸಿ ದಿನಾಚರಣೆ

Update: 2020-08-05 18:07 GMT

ಮಂಗಳೂರು, ಆ.5 : ಐಟಕ್, ಇಂಟಕ್, ಸಿಐಟಿಯು, ಎಐಕೆಎಸ್, ಎಸ್‌ಎಫ್‌ಐ, ಡಿವೈಎಫ್‌ಐ,ಜೆಎಂಎಸ್, ಡಿಎಚ್‌ಎಸ್ ಸಂಘಟನೆಗಳ ವತಿಯಿಂದ ಕೋವಿಡ್ -19 ಸಮರ್ಥ ನಿಯಂತ್ರಣಕ್ಕಾಗಿ ಎಪಿಎಂಸಿ, ಭೂ ಸುಧಾರಣೆ, ವಿದ್ಯುತ್ ಕಾಯ್ದೆ ತಿದ್ದುಪಡಿಗಳ ಹಾಗೂ ನೂತನ ಶಿಕ್ಷಣ ನೀತಿಯ ವಾಪಸ್‌ಗಾಗಿ, ಕಾರ್ಮಿಕ ಕಾನೂನುಗಳ ತಿದ್ದುಪಡಿಗಳ ವಿರುದ್ಧ, ಪ್ರತೀ ಕುಟುಂಬಕ್ಕೆ ಮಾಸಿಕ 7,500 ರೂ., ನೇರ ನಗದು ವರ್ಗಾವಣೆ ಹಾಗೂ 10 ಕೆಜಿ ಉಚಿತ ಆಹಾರ ಧಾನ್ಯ ವಿತರಣೆಗಾಗಿ ಮಹಿಳೆಯರು,ದಲಿತರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆಗಾಗಿ, ಉಪಕರಣ ಖರೀದಿ ಹಗರಣದ ಸಮಗ್ರ ತನಿಖೆಗಾಗಿ ಆ.10ರಂದು ಬೆಳಗ್ಗೆ 10ಕ್ಕೆ ನಗರದ ಮಿನಿ ವಿಧಾನಸೌಧದ ಮುಂದೆ ‘ದೇಶ ಉಳಿಸಿ ದಿನಾಚರಣೆ’ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News