ಭಾರತ, ಚೀನಾ ಸಂಬಂಧದಲ್ಲಿ ಗಡಿ ವಿವಾದವೇ ಮುಖ್ಯ ವಿಷಯವಾಗಬಾರದು: ಚೀನಾದ ಅಮೆರಿಕ ರಾಯಭಾರಿ ಹೇಳಿಕೆ

Update: 2020-08-05 18:08 GMT

ವಾಶಿಂಗ್ಟನ್, ಆ. 5: ಭಾರತ ಮತ್ತು ಚೀನಾಗಳ ನಡುವಿನ ಗಡಿ ವಿವಾದವು ಎರಡು ಪರಮಾಣು ಶಕ್ತ ಏಶ್ಯನ್ ದೇಶಗಳ ನಡುವಿನ ಸಂಬಂಧದಲ್ಲಿ ಮಖ್ಯ ವಿಷಯವಾಗಬಾರದು ಎಂದು ಅಮೆರಿಕಕ್ಕೆ ಚೀನಾದ ರಾಯಭಾರಿ ಕುಯಿ ಟಿಯಂನ್‌ಕೈ ಮಂಗಳವಾರ ಹೇಳಿದ್ದಾರೆ.

ದೀರ್ಘಕಾಲೀನ ಭಾರತ-ಚೀನಾ ಗಡಿ ವಿವಾದವು ಜೂನ್‌ನಲ್ಲಿ ಭುಗಿಲೆದ್ದಿದ್ದು, ಲಡಾಖ್‌ನಲ್ಲಿರುವ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಭೀಕರ ಸಂಘಷ್ ನಡೆದಿತ್ತು. ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತತ್ಮರಾಗಿದ್ದಾರೆ. ಚೀನಾದ ಕಡೆಯಲ್ಲೂ ಸಾವು-ನೋವುಗಳು ಸಂಭವಿಸಿವೆ ಎನ್ನಲಾಗಿದೆ. ಆದರೆ ಅದು ತನ್ನ ಸಾವು-ನೋವುಗಳ ಸಂಖ್ಯೆಯನ್ನು ಬಿಡುಗಡೆ ಮಾಡಿಲ್ಲ.

‘‘ಈ ವಿಷಯವು ಭಾರತ ಮತ್ತು ಚೀನಾಗಳ ನಡುವಿನ ಸಂಬಂಧದಲ್ಲಿ ಪ್ರಧಾನವಾಗಬೇಕೆಂದು ನನಗನಿಸುವುದಿಲ್ಲ ಹಾಗೂ ಇದು ನಮ್ಮ ಭಾರತೀಯ ಸ್ನೇಹಿತರ ನಿಲುವು ಆಗಿದೆ ಎಂದೂ ನಾನು ಭಾವಿಸುವುದಿಲ್ಲ’’ ಎಂದು ಆ್ಯಸ್ಪನ್ ಸೆಕ್ಯುರಿಟಿ ಫೋರಂನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಚೀನಾ ರಾಯಭಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News