ಭೂ ಸುಧಾರಣೆ ಕಾಯ್ದೆಯಿಂದ ಕೃಷಿ ಕ್ಷೇತ್ರ ಅಭಿವೃದ್ಧಿ: ಸಹಕಾರ ಭಾರತಿ

Update: 2020-08-06 11:57 GMT

ಉಡುಪಿ, ಆ. 6: ಕರ್ನಾಟಕ ಭೂ ಸುಧಾರಣೆ ಕಾಯ್ದೆ 79ಎ ಮತ್ತು ಬಿ ಕಾಯ್ದೆಯಿಂದ ರಾಜ್ಯದ ಎಲ್ಲಾ ಸಹಕಾರಿ ಸಂಸ್ಥೆಗಳು ಕೃಷಿಭೂಮಿ ಖರೀದಿಸಲು ಸಾಲ ನೀಡಬಹುದಾಗಿದೆ. ಮಾತ್ರವಲ್ಲದೆ ಕೃಷಿಭೂಮಿಯನ್ನು ಸಹಕಾರಿ ಹೆಸರಿ ನಲ್ಲಿ ಖರೀದಿಸಿ ಅದರಲ್ಲಿ ಕೃಷಿ ಆಧಾರಿತ ಚಟುವಟಿಕೆ ಮಾಡಬಹುದಾಗಿದೆ ಎಂದು ಸಹಕಾರ ಭಾರತಿ ತಿಳಿಸಿದೆ.

ಎಲ್ಲಾ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಪ್ರಯೋಗ ಶಾಲೆಯನ್ನು ನಡೆಸಬಹು ದಾಗಿದೆ. ಮುಂದಿನ ದಿನಗಳಲ್ಲಿ ಈ ಕಾಯ್ದೆ ತಿದ್ದುಪಡಿಯಿಂದ ಸಹಕಾರಿ ಬೇಸಾಯ ಪದ್ದತಿ ಜಾರಿ ಬಂದು ಕೃಷಿ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದು ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟ, ಜಿಲ್ಲಾ ಸಂಘಟನಾ ಪ್ರಮುಖ ಮಂಜುನಾಥ ಎಸ್.ಕೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧೂಸೂಧನ ನಾಯಕ್ ಮತ್ತು ಪ್ರಶಾಂತ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News