ಗಣೇಶೋತ್ಸವ ಪ್ರಯುಕ್ತ ರಾಷ್ಟ್ರಮಟ್ಟದ ಸೃಜನಾತ್ಮಕ ಸ್ಪರ್ಧೆ

Update: 2020-08-06 13:57 GMT

ಉಡುಪಿ, ಆ.6: ಗಣೇಶೋತ್ಸವ ಅಂಗವಾಗಿ ಲಾಂಛನ ಸಂಸ್ಥೆ ವತಿಯಿಂದ ಗಣೇಶನ ಕುರಿತ ಚಿತ್ರ ರಚನೆ ಮತ್ತು ಕವನ ರಚನೆಯ ರಾಷ್ಟ್ರ ಮಟ್ಟದ ಸೃಜನಾತ್ಮಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಕೊರೋನ ಹಿನ್ನೆಲೆಯಲ್ಲಿ ಸ್ಪರ್ಧಾಳುಗಳು ಮನೆಯಿಂದಲೇ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಲಾಂಛನ ಸಂಸ್ಥೆಯ ಶಶಾಂಕ ಶಿವತ್ತಾಯ ಇಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

‘ವಿಶ್ವ ಗುರು ಗಣೇಶ’ ಪರಿಕಲ್ಪನೆಯಡಿ ಜಲವರ್ಣ ಚಿತ್ರ ರಚನೆ ಹಾಗೂ ‘ಚಿಹ್ನೆಯಾಗಿ ಗಣೇಶ’ ಲಾಂಛನದಡಿ ರೇಖಾಚಿತ್ರ ರಚನೆ ಸ್ಪರ್ಧೆ ನಡೆಯಲಿದೆ. ಈ ಎರಡೂ ವಿಭಾಗಗಳಲ್ಲಿಯೂ ವಿಜೇತರಾದವರಿಗೆ ಪ್ರಥಮ 7000 ರೂ., ದ್ವಿತೀಯ 5000 ರೂ., ತೃತೀಯ 3000ರೂ. ನಗದು ಹಾಗೂ ಪ್ರಮಾಣಪತ್ರ ನೀಡಲಾಗುವುದು.

‘ಏಕತೆಯಲ್ಲಿ ಗಣೇಶ’ ಪರಿಕಲ್ಪನೆಯಡಿ ಕನ್ನಡ, ಹಿಂದಿ, ಆಂಗ್ಲಭಾಷೆಯಲ್ಲಿ ಕವನ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಾದವರಿಗೆ ಪ್ರಥಮ 5000ರೂ., ದ್ವಿತೀಯ 4000ರೂ., ತೃತೀಯ 3000ರೂ. ನಗದು ಹಾಗೂ ಪ್ರಮಾಣಪತ್ರ ನೀಡಲಾಗುವುದು. 14 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವಯೋಮಾನದವರು ಭಾಗವಹಿಸಬಹುದು. ಆ.31ರೊಳಗೆ ಲಾಂಛನ, ಶ್ರೀಮಾತಾ, ಎಸ್.ಟಿ. ಮಾರ್ಗ, ಕುಂಜಿಬೆಟ್ಟು, ಉಡುಪಿ ಈ ವಿಳಾಸಕ್ಕೆ ಚಿತ್ರ ಹಾಗೂ ಕವನಗಳನ್ನು ಕಳಿಸಬೇಕು. ಸೆ.7ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತೇಜಸ್ವಿ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News