ಬ್ರಾಹ್ಮಣ ಜಾತಿ ಪ್ರಮಾಣ ಪತ್ರ ನೀಡಲು ಕ್ರಮ: ಶಿವರಾಮ ಉಡುಪ

Update: 2020-08-06 14:41 GMT

ಉಡುಪಿ, ಆ.6: ರಾಜ್ಯ ಸರಕಾರದ ಸೂಚನೆಯಂತೆ ಆರ್ಥಿಕವಾಗಿ ಹಿಂದು ಳಿದ ಬ್ರಾಹ್ಮಣ ಸಮುದಾಯದವರಿಗೆ ಉದ್ಯೋಗ, ಶಿಕ್ಷಣ, ಸರಕಾರಿ ಸೌಲಭ್ಯ ಗಳಿಗಾಗಿ ಬ್ರಾಹ್ಮಣ ಜಾತಿ ಪ್ರಮಾಣ ಪತ್ರ ನೀಡಲು ಕಂದಾಯ ಇಲಾಖೆ ಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ನಿಗಮ ಸದಸ್ಯ ಸಾಲಿಗ್ರಾಮ ಶಿವರಾಮ ಉಡುಪ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ನಿಗಮದ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರನ್ನು ವಿನಂತಿಸಿದ ಮೇರೆಗೆ ಸರಕಾರ ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿ ಗಳಿೆ ಈ ಬಗ್ಗೆ ಸೂಚನೆ ನೀಡಿದೆ ಎಂದರು.

ತಾಲೂಕು ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆ ಹಾಗೂ ಪೂರಕ ಮಾಹಿತಿ ನೀಡಿ 20ರೂ. ಮುಖಬೆಲೆಯ ಛಾಪಾಕಾಗದದಲ್ಲಿ ಘೋಷಣೆ ನೀಡಬೇಕು. ವಾರ್ಷಿಕ 8 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರು ಕೇಂದ್ರ ಸರಕಾರ ಘೋಷಿಸಿರುವ ಆರ್ಥಿಕವಾಗಿ ಹಿಂದುಳಿದ ಮುಂದುವರಿದ ಸಮಾಜ ದವರಿಗೆ ನೀಡಲಾದ ಶೇ.10 ಮೀಸಲಾತಿಯ ಅರ್ಹತೆ ಪಡೆಯಲು ಅರ್ಹರಾಗುತ್ತಾರೆ ಎಂದರು.

ನಿಗಮದ ವಿವಿಧ ಯೋಜನೆಗಳಾದ ಸಾಂದೀಪನೀ ಶಿಷ್ಯವೇತನ, ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ, ಚಾಣಕ್ಯ ಆಡಳಿತ ತರಬೇತಿ ಯೋಜನೆ, ವಿಶ್ವೇಶ್ವರಯ್ಯ ಕೌಶಲ್ಯಾಭಿವೃದ್ಧಿ ಯೋಜನೆ, ಚೈತನಯ ಯೋಜನೆ ಮೊದಲಾದವುಗಳ ಅನುಷ್ಠಾನಗಳ ಬಗ್ಗೆ ಈಗಾಗಲೇ ನಿರ್ಧರಿಸಲಾಗಿದೆ. ಪ್ರತೀ ಜಿಲ್ಲಾ ಕೇಂದ್ರಗಳಲ್ಲಿ ಸಹಾಯ ಕೇಂದ್ರ ತೆರೆಯವ ಬಗ್ಗೆ ತೀರ್ಮಾನ ತೆಗೆದುಕೊ್ಳಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿಗದ ಸದಸ್ಯ ಕಾರ್ಕಳ ರಾಜೇಶ್ ನಡ್ಯಂತಿಲ್ಲಾಯ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News