ವೆನ್ಲಾಕ್: ನರ್ಸ್, ಫಾರ್ಮಾಸಿಸ್ಟ್ ಹುದ್ದೆಗೆ ನೇರ ನೇಮಕಾತಿ

Update: 2020-08-06 17:56 GMT

ಮಂಗಳೂರು, ಆ.6: ಕೊವೀಡ್ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಖಾಲಿ ಇರುವ ಶುಶ್ರೂಷಕರು ಹಾಗೂ ಫಾರ್ಮಾಸಿಸ್ಟ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.

ವೆನ್ಲಾಕ್‌ನಲ್ಲಿ ಖಾಲಿ ಇರುವ 16 ಶುಶ್ರೂಷಕರ ಹುದ್ದೆಗಳಿಗೆ ಡಿಪ್ಲೋಮಾ ಇನ್ ನರ್ಸಿಂಗ್ ವಿದ್ಯಾರ್ಹತೆ (ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿ ಕಡ್ಡಾಯ) ಹೊಂದಿದವರು ಅರ್ಹರಾಗಿದ್ದಾರೆ. ನೇಮಕಗೊಂಡ ಶುಶ್ರೂಷಕರಿಗೆ 25 ಸಾವಿರ ರೂ. ವೇತನ ನೀಡಲಾಗುವುದು.

ಆಸ್ಪತ್ರೆಯಲ್ಲಿ ಖಾಲಿ ಇರುವ ಮೂರು ಫಾರ್ಮಾಸಿಸ್ಟ್ ಹುದ್ದೆಗಳಿಗೆ ಡಿ-ಫಾರ್ಮಾ (ಫಾರ್ಮಾಸಿ ಕೌನ್ಸಿಲ್‌ನಲ್ಲಿ ನೋಂದಣಿ) ವಿದ್ಯಾರ್ಹತೆ ಹೊಂದಿದವರು ಅರ್ಹರು. ನೇಮಕಗೊಂಡ ಫಾರ್ಮಾಸಿಸ್ಟ್‌ಗಳಿಗೆ 20 ಸಾವಿರ ರೂ. ವೇತನ ನೀಡಲಾಗುವುದು.

ಹುದ್ದೆಗಳಿಗೆ ಆರು ತಿಂಗಳು ಅಥವಾ ನೇರ ನೇಮಕಾತಿ ಹುದ್ದೆಗಳು ಭರ್ತಿಯಾಗುವವರೆಗೆ ಗುತ್ತಿಗೆ ಆಧಾರದ ಮೇಲೆ ಮೆರಿಟ್ ಆಧಾರದಲ್ಲಿ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಆಗಸ್ಟ್ 10 ರಂದು ಬೆಳಗ್ಗೆ 11 ಗಂಟೆಗೆ ದ.ಕ. ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ನೇರ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ವಿದ್ಯಾರ್ಹತೆ ಮೂಲ ಪ್ರಮಾಣಪತ್ರ ಹಾಗೂ ಅದರ ಸ್ವಯಂ ದೃಢೀಕೃತ ನಕಲು ಪ್ರತಿ, ಅನುಭವ ಹೊಂದಿದ್ದಲ್ಲಿ ಅನುಭವ ಪ್ರಮಾಣಪತ್ರ ಹಾಗೂ ಇತ್ತೀಚಿನ ಭಾವಚಿತ್ರವನ್ನೊಳಗೊಂಡ ನಿಗದಿತ ಅರ್ಜಿಯೊಂದಿಗೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರ ಕಚೇರಿ, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಹಂಪನಕಟ್ಟೆ, ಮಂಗಳೂರು ಅಥವಾ ದೂ.ಸಂ.: 0824- 2413205, 0824- 2421351, 0824- 2425137ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News