ಆ. 8-10: ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ

Update: 2020-08-06 17:58 GMT

ಮಂಗಳೂರು, ಆ.6: ನಗರದ ಅತ್ತಾವರ, ನೆಹರೂಮೈದಾನ ಉಪಕೇಂದ್ರಗಳಿಂದ ಹೊರಡುವ ವಿವಿಧ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ (ಜಂಪರ್ ಬದಲಾವಣೆ, ಜಿಒಎಸ್ ದುರಸ್ತಿ) ಹಮ್ಮಿಕೊಂಡಿದ್ದು, ಆ.8ರಿಂದ 10ರವರೆಗೆ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ.

ಅತ್ತಾವರ: ಆ.8ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ 33/11 ಕೆವಿ ಅತ್ತಾವರ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಮುತ್ತಪ್ಪ ಟೆಂಪಲ್ ಫೀಡರ್‌ನಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿದೆ. ಇದರಿಂದ ಪೊಲೀಸ್ ಲೇನ್, ಪಿಡಬ್ಲೂಡಿ, ವಾಣಿಜ್ಯ ತೆರಿಗೆ, ಅಗ್ನಿಶಾಮಕ ಸೇವಾ ಕೇಂದ್ರ, ಕೇರಳ ಸಮಾಜ ಶಾಲೆ, ಒಲ್ಡ್ ಕೆಂಟ್ ರಸ್ತೆ, ಎಂ.ವಿ. ಶೆಟ್ಟಿ, ದೂಮಪ್ಪಕಂಪೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ನೆಹರೂ ಮೈದಾನ: ಆ.9ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ 33/11 ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಸೌತ್‌ವಾರ್ಫ್ ಫೀಡರ್‌ನಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿದ್ದು, ಹ್ಯಾಮಿಲ್ಟನ್ ಸರ್ಕಲ್, ಜಿಲ್ಲಾಧಿಕಾರಿ ಕಚೇರಿ, ಸೈಂಟ್ ಆನ್ಸ್, ನೀರೇಶ್ವಲ್ಯ ರಸ್ತೆ, ಗೂಡ್ಸ್‌ಶೆಡ್ ರಸ್ತೆ, ಸಂಜೆವಾಣಿ, ಬದ್ರಿಯಾ ರಸ್ತೆ, ಧಕ್ಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

ಆ.10ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ 33/11 ಕೆ.ವಿ. ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಪಾಂಡೇಶ್ವರ ಫೀಡರ್‌ನಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಇದರಿಂದ ಎ.ಬಿ.ಶೆಟ್ಟಿ ಸರ್ಕಲ್, ಭಾರತೀಯ ವಿಶ್ವವಿದ್ಯಾಭವನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಪಾಂಡೇಶ್ವರ ಕಟ್ಟೆ, ಪಾಂಡೇಶ್ವರ ಹೊಸ ರಸ್ತೆ, ಮಹಾಲಿಂಗೇಶ್ವರ ದೇವಸ್ಥಾನ, ಅಮೃತನಗರ, ರೋಸಾರಿಯೊ ಚರ್ಚ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಸಂಬಂಧಪಟ್ಟ ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News