ಎಸ್‌ಡಿಪಿಐ ವಳಚ್ಚಿಲ್ ವತಿಯಿಂದ ಉಚಿತ ಮಾಹಿತಿ, ಸೇವಾ ಕೇಂದ್ರ ಉದ್ಘಾಟನೆ

Update: 2020-08-06 18:00 GMT

ಮಂಗಳೂರು: ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಅರ್ಕುಳ ಅಡ್ಯಾರ್ ಗ್ರಾಮ ಸಮಿತಿ ವತಿಯಿಂದ ವಳಚ್ಚಿಲ್ ನಲ್ಲಿ ಇಂಫರ್ಮೇಶನ್ ಆಂಡ್ ಎಂಪವರ್ ಮೆಂಟ್ ಸೆಂಟರ್ (ಮಾಹಿತಿ ಮತ್ತು ಸೇವಾ ಕೇಂದ್ರ) ವನ್ನು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮೊಹಮ್ಮದ್ ತುಂಬೆ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದ ವಿವಿಧ ಕಡೆ ಪಕ್ಷದ ಅಧೀನದಲ್ಲಿರುವ ಎಲ್ಲಾ ಮಾಹಿತಿ ಮತ್ತು ಸೇವಾ ಕೇಂದ್ರದಲ್ಲಿ ವಿದ್ಯಾರ್ಥಿ ಗಳಿಗಾಗಿ ವಿದ್ಯಾರ್ಥಿ ವೇತನ, ಸರಕಾರಿ ಉದ್ಯೋಗ, ಮತ್ತು ವಿವಿಧ ಸರಕಾರಿ ಯೋಜನೆಗಳಿಗೆ ಉಚಿತವಾಗಿ ಅರ್ಜಿ ಹಾಕಲು ಎಲ್ಲಾ ಧರ್ಮ ದವರು ಭೇಟಿ ನೀಡಿ ಸದುಪಯೋಗ ಪಡೆಯುತ್ತಿದ್ದಾರೆ. ಮಾಹಿತಿ ಮತ್ತು ಸೇವೆಯ ಕೊರತೆಯಿಂದ ಜನರು, ವಿದ್ಯಾರ್ಥಿಗಳು ಸರಕಾರ ಮತ್ತು ವಿವಿಧ ಯೋಜನೆಯಿಂದ ವಂಚಿಸಲ್ಪಡಬಾರದು ಎಂಬ ಉದ್ದೇಶದಿಂದ ಪಕ್ಷವೂ ರಾಜ್ಯದ ವಿವಿಧ ಕಡೆ ಉಚಿತ ಮಾಹಿತಿ ಮತ್ತು ಸೇವಾ ಕೇಂದ್ರದ ಮೂಲಕ ಕಾರ್ಯಾಚರಿಸುತ್ತಿದೆ. ಇದನ್ನು ಎಲ್ಲಾ ಧರ್ಮದವರು ಸದುಪಯೋಗ ಪಡಿಸಿಕೊಳ್ಳಲು ವಿನಂತಿಸಿದರು.

ಹಾಫಿಲ್ ಸಿನಾನ್ ಮುಸ್ಲಿಯಾರ್ ದುವಾಗೈದರು, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್.ಎಚ್, ಉಪಾಧ್ಯಕ್ಷರಾದ ಇಕ್ಬಾಲ್ ಐಎಮ್ ಆರ್, ಜಿಲ್ಲಾ ಸಮಿತಿ ಸದಸ್ಯ ಲ್ಯಾನ್ಸಿ ತೊರೆಸ್, ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಹಮೀದ್ ಹಾಜಿ, ಅಡ್ಯಾರ್ ಗ್ರಾಮ ಪಂ ಸದಸ್ಯ ರಾದ ಉಬೈದ್, ಅಬ್ಬಾಸ್, ಪುದು ಗ್ರಾ.ಪಂ ಸದಸ್ಯ ನಝೀರ್ ಕುಂಜತ್ಕಳ, ಪಿ.ಎಫ್.ಐ ಫರಂಗಿಪೇಟೆ ವಲಯಾಧ್ಯಕ್ಷ ನಿಸಾರ್ ವಳವೂರ್, ಅರ್ಕುಳ ಏರಿಯಾ ಅಧ್ಯಕ್ಷ ನಝೀರ್ ವಲಚ್ಚಿಲ್, ಕಾರ್ಯದರ್ಶಿ ರಶೀದ್ ಅರ್ಕುಳ ಉಪಸ್ಥಿತರಿದ್ದರು. ಎಸ್‌ಡಿಪಿಐ ಅರ್ಕುಳ ಅಡ್ಯಾರ್ ಗ್ರಾಮ ಸಮಿತಿ ಅಧ್ಯಕ್ಷ ಯಾಸೀನ್ ಅರ್ಕುಳ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು ರಮೀಝ್ ಅರ್ಕುಳ ನಿರೂಪಿಸಿ ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News