×
Ad

ಜಮ್ಮು-ಕಾಶ್ಮೀರದ ಲೆ.ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ್ದ ಮುರ್ಮು ಸಿಎಜಿ ಆಗಿ ನೇಮಕ

Update: 2020-08-07 11:25 IST

ಹೊಸದಿಲ್ಲಿ, ಆ.7: ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮರುದಿನವೇ ಗಿರೀಶ್ ಚಂದ್ರ ಮುರ್ಮು ನೂತನ ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ(ಸಿಎಜಿ)ಆಗಿ ನೇಮಕವಾಗಿದ್ದಾರೆ.

ಹಾಲಿ ಸಿಎಜಿ ರಾಜೀವ್ ಮೆಹರಿಷಿ ಅವರ ಅಧಿಕಾರವಧಿಯು ಶುಕ್ರವಾರ(ಜು.8)ಪೂರ್ಣಗೊಳ್ಳಲಿದೆ.

ಗುಜರಾತ್ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿಯಾಗಿರುವ ಮುರ್ಮು ವಿತ್ತ ಸಚಿವಾಲಯದ ಖರ್ಚು ಕಾರ್ಯದರ್ಶಿಯಾಗಿ ನಿವೃತ್ತಿಯಾಗುವ ಒಂದು ತಿಂಗಳು ಮೊದಲು ಕಳೆದ ವರ್ಷದ ಅಕ್ಟೋಬರ್ 25 ರಂದು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದರು.

ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆ ನಡೆಸುವುದು ಹಾಗೂ 4 ಜಿ ಇಂಟರ್‌ನೆಟ್ ಸೇವೆಗಳನ್ನು ಮರು ಸ್ಥಾಪಿಸುವುದಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ಬಳಿಕ ಮುರ್ಮು ಎಲ್-ಜಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮುರ್ಮು ಅವರ ಹೇಳಿಕೆ ಕೇಂದ್ರದ ಸ್ಥಾನಕ್ಕೆ ವಿರುದ್ಧವಾಗಿ ಕಂಡುಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News