ಬಜಾಲ್ : ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಕಾಮತ್

Update: 2020-08-07 10:09 GMT

ಮಂಗಳೂರು : ಮಹಾನಗರ ಪಾಲಿಕೆಯ ಬಜಾಲ್ ವಾರ್ಡಿನಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ಬಜಾಲ್ ವಾರ್ಡಿನ ಸರ್ವತೋಮುಖ ಅಭಿವೃದ್ಧಿಯ ಚಿಂತನೆಯೊಂದಿಗೆ ವಿಶೇಷ ಅನುದಾನಗಳನ್ನು ಒದಗಿಸಲಾಗುತ್ತದೆ. ಬಜಾಲ್ ಜಲ್ಲಿಗುಡ್ಡೆಯ ಕೋರ್ದಬ್ಬು ದೇವಸ್ಥಾನ ಬಳಿಯಿಂದ ಕಾನಕರಿಯ ಬಂಟ ಮಂದಿರದ ವರೆಗಿನ ರಸ್ತೆ ಸಂಪೂರ್ಣ ಹಾಳಾಗಿ ಮಳೆಗಾಲದಲ್ಲಿ ಸಂಚರಿಸುವುದು ಕಷ್ಟವಾಗಿತ್ತು. ಹಾಗಾಗಿ ಮುಖ್ಯಮಂತ್ರಿ ವಿಶೇಷ ಅನುದಾನದಿಂದ ಲೋಕೋಪಯೋಗಿ ಇಲಾಖೆಯ ಮೂಲಕ 1 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.

ಕೋವಿಡ್ ಕಾರಣದಿಂದ ವಲಸೆ ಕಾರ್ಮಿಕರು ತಮ್ಮ ಊರಿಗೆ ತೆರಳಿರುವ ಕಾರಣ ಕಾಮಗಾರಿಗಳೆಲ್ಲವೂ ನಿಧಾನವಾಗಿ ಸಾಗುತ್ತಿದೆ. ಆದರೆ ಸಾಧ್ಯವಾಗಷ್ಟು ಬೇಗನೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಹಾಗೂ ಸಾರ್ವಜನಿಕರೂ ಕೂಡ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ಅಶ್ರಫ್ ,ಮ.ನ.ಪಾ ಸ್ಥಾಯಿ ಸಮಿತಿ ಅದ್ಯಕ್ಷರಾದ ಜಗದೀಶ್ ಶೆಟ್ಟಿ ಬೋಳೂರು,ಪೂರ್ಣಿಮ ,ಬಿಜೆಪಿ ನಾಯಕರಾದ ಚಂದ್ರಶೇಖರ ಜಯನಗರ,ಭಾಸ್ಕರ ಚಂದ್ರ ಶೆಟ್ಟಿ,ವಸಂತ್ ಪೂಜಾರಿ,ಶಿವಾಜಿ ರಾವ್,ಯಶವಂತ ಶೆಟ್ಟಿ, ಹರಿಪ್ರಸಾದ್, ಸ್ಥಳಿಯರಾದ ಉಸ್ಮಾನ್,ವಿನೀತ್,ಇಂತಿಯಾಜ್,ಪ್ರೀತೇಶ್, ರಾಮಣ್ಣ ಕಾನಕರಿಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News