ಬಿಐಟಿಯಿಂದ ದ್ವಿತೀಯ ಆನ್‌ಲೈನ್ ಸಮ್ಮೇಳನ 'ಎಸ್.ಯು.ಆರ್.ಎಫ್-2020' ಉದ್ಘಾಟನೆ

Update: 2020-08-07 11:27 GMT

ಮಂಗಳೂರು, ಆ.7: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು  ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ ವತಿಯಿಂದ ಗುರುವಾರ ಇಂಟರ್‌ ನ್ಯಾಷನಲ್ ಕಾರ್ಬನ್ ನ್ಯೂಟ್ರಲ್ ದ್ವೀತೀಯ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.

ಆರು ದಿನಗಳ ಈ ಪ್ರಮುಖ ಕಾರ್ಯಕ್ರಮವು ‘‘ಸುಸ್ಥಿರ ನಗರಾಭಿವೃದ್ಧಿ, ಸಂಪನ್ಮೂಲ ಸಂರಕ್ಷಣೆ ಮತ್ತು ಆಹಾರ ಭದ್ರತೆ (ಎಸ್‌ಯುಆರ್‌ಎಫ್- 2020) ಶೀರ್ಷಿಕೆಯಡಿ ನಡೆಯುತ್ತಿದೆ.

ಸಂಸ್ಥೆಯ ಅಂತರ್ ರಾಷ್ಟ್ರೀಯ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬಿಐಟಿ ಪ್ರಾಂಶುಪಾಲ ಡಾ.ಎಸ್.ಐ.ಮಂಜೂರ್ ಬಾಷಾ ಸ್ವಾಗತಿಸಿದರು. ಅವರು ಮಾತನಾಡುತ್ತಾ, ಪರಿಸರ ಬದಲಾವಣೆಗಳು ಮತ್ತು ಅದರ ಸವಾಲುಗಳ ಕುರಿತು ಬೆಳಕು ಚೆಲ್ಲಿದರು.

ಬ್ಯಾರೀಸ್ ಗ್ರೂಪ್‌ನ ಅಧ್ಯಕ್ಷರಾದ ಸಯ್ಯದ್ ಮುಹಮ್ಮದ್ ಬ್ಯಾರಿ ಮಾತನಾಡಿ, ಕೆಲವೊಂದು ಮಾನವ ಚಟುವಟಿಕೆಗಳು ಪ್ರಕೃತಿಗೆ ಹಾನಿಕಾರಕವಾಗಿ ಪರಿಣಮಿಸುತ್ತದೆ. ಈ ನಿಟ್ಟಿನಲ್ಲಿ ಸಂಶೋಧನಾ ಬರಹಗಳು ಸಮಾಜ ಮತ್ತು ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗೆ ಪ್ರಾಯೋಗಿಕ ಪರಿಹಾರವನ್ನು ಹೊಂದಿರಬೇಕು ಎಂದು ಅವರು ಅಭಿಪ್ರಾಯಿಸಿದರು. ಪ್ರಸಕ್ತ ಸಂಕಷ್ಟಮಯ ಪರಿಸ್ಥಿತಿಯಲ್ಲಿ ಅಗತ್ಯವಿರುವವರಿಗೆ ಸಹಾಯ ಹಸ್ತ ನೀಡಬೇಕು ಎಂದು ಅವರು ಕರೆ ನೀಡಿದರು.

ಸಮ್ಮೇಳನದ ಸಂಚಾಲಕರಾದ ಅಶೋಕ್ ಎಲ್.ಪಿ. ಮೆಂಡೋನ್ಸಾ, ಸಮ್ಮೇಳನದ ಕುರಿತು ಮಾಹಿತಿ ನೀಡಿದರು. ಪ್ರಕಟಣಾ ಮುಖ್ಯಸ್ಥರಾದ ಡಾ. ಅಬ್ದುಲ್ಲಾ ಗುಬ್ಬಿ ಅವರು ಸ್ವೀಕೃತವಾದ ಸಂಶೋಧನಾ ಬರಹಗಳ ಅಂಕಿ ಅಂಶ ನೀಡಿದರು.

ಬಿಐಟಿ ಪಾಲಿಟೆಕ್ನಿಕ್ ನಿರ್ದೇಶಕ ಡಾ. ಅಝೀಝ್ ಮುಸ್ತಫಾ ವಂದಿಸಿದರು. ಸಮ್ಮೇಳನದ ಪ್ರಥಮ ದಿನದಂದು ಒಟ್ಟು ನಲವತ್ತೊಂದು ಸಂಶೋಧನಾ ಬರಹಗಳು ಪ್ರಸ್ತುತಗೊಂಡವು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರು, ಬೋಧನಾ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

ಉದ್ಘಾಟನೆಯ ಸಮಾರಂಭವನ್ನು ಬಿಐಟಿಯ ಪ್ರಾಧ್ಯಾಪಕರಾದ ಪ್ರೊ. ಅಂಕಿತಾ ಬೆಕಲ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News