ಪುತ್ತೂರು, ಕಡಬ: 13 ಮಂದಿಗೆ ಕೊರೋನ ಪಾಸಿಟಿವ್

Update: 2020-08-07 12:38 GMT

ಪುತ್ತೂರು: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಶುಕ್ರವಾರ 13 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ತನಕ ಪುತ್ತೂರು ತಾಲೂಕಿನಲ್ಲಿ ಒಟ್ಟು 358 ಕೊರೋನಾ ಪ್ರಕರಣಗಳು ವರದಿಯಾಗಿವೆ. 

ಪುತ್ತೂರು ತಾಲೂಕಿನ ನಗರಸಭಾ ವ್ಯಾಪ್ತಿಯ ಮುಕ್ರಂಪಾಡಿ ನಿವಾಸಿ ಒಂದೇ ಮನೆಯ 26 ವರ್ಷದ ಯುವಕ, 58 ವರ್ಷದ ಪುರುಷ ಹಾಗೂ 47 ವರ್ಷದ ಮಹಿಳೆ, ಪುತ್ತೂರು ಸಂಚಾರ ಪೊಲೀಸ್ ಠಾಣೆಯ 56 ವರ್ಷದ ಸಿಬಂದಿ, ಪುತ್ತೂರು ಸರಕಾರಿ ಆಸ್ಪತ್ರೆಯ ಪರಿಸರದ 40 ವರ್ಷದ ಪುರುಷ, 54 ವರ್ಷದ ಮಹಿಳೆ, ಪುತ್ತೂರು ನಗರದ ದರ್ಬೆ ನಿವಾಸಿ 47 ವರ್ಷದ ಪುರುಷ, ಕಬಕ ನಿವಾಸಿ 45 ವರ್ಷದ ಮಹಿಳೆ, ಬಲ್ನಾಡು ಗ್ರಾಮದ 33 ವರ್ಷದ ಯುವಕ, 34ನೇ ನೆಕ್ಕಿಲಾಡಿ ಗ್ರಾಮದ 32 ವರ್ಷದ ಯುವಕ, ಕೆಮ್ಮಾಯಿ ಕೃಷ್ಣನಗರ ನಿವಾಸಿ ವೃದ್ಧ 73 ವರ್ಷ ಸೇರಿಂದತೆ ಒಟ್ಟು 13 ಮಂದಿಗೆ ಕೊರೋನಾ ದೃಢಪಟ್ಟಿದೆ. 

ಕಡಬ ತಾಲೂಕಿನ ಕೊಣಾಲು ಗ್ರಾಮದ 23 ವರ್ಷದ ಯುವಕ, ರಾಮಕುಂಜ ಗ್ರಾಮದ 26 ವರ್ಷದ ಯುವಕನಲ್ಲಿ ಕೊರೋನಾ ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News