ಪಿಎಗೆ ಕೊರೋನ: ಕಾಪು ಶಾಸಕ ಹೋಂ ಕ್ವಾರಂಟೈನ್
Update: 2020-08-07 20:38 IST
ಕಾಪು, ಆ.7: ಆಪ್ತ ಕಾರ್ಯದರ್ಶಿಗೆ ಕೊರೋನ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೋಂ ಕ್ವಾರಂಟೈನ್‌ಗೆ ಒಳಗಾಗಿರುವ ಬಗ್ಗೆ ವರದಿಯಾಗಿದೆ.
ಶುಕ್ರವಾರ ಕಂದಾಯ ಸಚಿವ ಆರ್.ಅಶೋಕ್ ಕಾಪು ಕ್ಷೇತ್ರ ವ್ಯಾಪ್ತಿಯ ಪಡುಬಿದ್ರಿ ಬೀಚ್‌ಗೆ ಭೇಟಿ ನೀಡಿದ ವೇಳೆ ಶಾಸಕರ ಗೈರು ಹಾಜರು ಎದ್ದು ಕಾಣುತ್ತಿತ್ತು. ಈ ಬಗ್ಗೆ ವಿಚಾರಿಸಿದಾಗ ಶಾಸಕರು ಕ್ವಾರಂಟೈನ್‌ನಲ್ಲಿರುವುದು ತಿಳಿದುಬಂತು.
ಶಾಸಕರ ಆಪ್ತ ಕಾರ್ಯದರ್ಶಿಗೆ ಕೊರೋನ ಸೋಂಕು ಇರುವುದು ದೃಢ ಪಟ್ಟಿರುವುದರಿಂದ ಅವರನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಶಾಸಕರು, ಇಂದಿನಿಂದ 14 ದಿನಗಳ ಕಾಲ ಮನೆಯಲ್ಲಿ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.