ಗ್ರಾಮ ಲೆಕ್ಕಾಧಿಕಾರಿ ಕರ್ತವ್ಯಕ್ಕೆ ಅಡ್ಡಿ ಆರೋಪ : ಮಾಜಿ ಅಧ್ಯಕ್ಷನ ವಿರುದ್ಧ ಪ್ರಕರಣ

Update: 2020-08-07 15:11 GMT

ಕಾಪು, ಆ.7: ಮಜೂರು ಗ್ರಾಪಂನ ಪ್ರಭಾರ ಗ್ರಾಮ ಲೆಕ್ಕಾಧಿಕಾರಿಗೆ ಬೆದರಿಕೆ ಯೊಡ್ಡಿ, ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿರುವ ಆರೋಪದಡಿ ಮಾಜಿ ಅಧ್ಯಕ್ಷ ಸಂದೀಪ್ ರಾವ್ ವಿರುದ್ಧ ನ್ಯಾಯಾಲಯದ ಖಾಸಗಿ ದೂರಿ ನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂದೀಪ್ ರಾವ್ ತನ್ನ ಅಧ್ಯಕ್ಷ ಅವಧಿ ಮುಗಿಯುವ ಮೊದಲೇ ಗ್ರಾಪಂ ನಿರ್ಣಯದೊಂದಿಗೆ ಕಾನೂನು ಬಾಹಿರವಾಗಿ ಸರಕಾರಿ ಜಮೀನನ್ನು ಬಹಿರಂಗ ಹರಾಜು ಮಾಡಿ ನಾಲ್ಕು ಜನರಿಂದ ಮುಂಗಡ ಹಣವನ್ನು ಪಡೆದು ದಿನದ ಬಾಡಿಗೆಗೆ ತರಕಾರಿ ಮತ್ತು ಮೀನು ಅಂಗಡಿಗಳಿಗೆ ಅನುಮತಿ ನೀಡಿದ್ದಾರೆ. ಅಧ್ಯಕ್ಷರ ಅಧಿಕಾರಾವಧಿ ಮುಗಿದ ನಂತರ ಅಂಗಡಿ ಮಾಲಕರು ಸರಕಾರಿ ಜಮೀನಿನಲ್ಲಿ ಶೆಡ್ ನಿರ್ಮಾಣ ಮಾಡುವು ದಕ್ಕೆ ಗ್ರಾಮ ಲೆಕ್ಕಾಧಿಕಾರಿ ಮಥಾಯಿ ಪಿ.ಎಂ. ತಡೆಯೊಡ್ಡಿದ್ದರು ಎಂದು ದೂರಲಾಗಿದೆ.

ಇದೇ ವಿಚಾರವಾಗಿ ಜು.14ರಂದು ಸಂದೀಪ್ ರಾವ್, ಗ್ರಾಮ ಲೆಕ್ಕಾಧಿ ಕಾರಿಗೆ ದೂರವಾಣಿ ಮೂಲಕ ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವ ರೀತಿ ಮಾತನಾಡಿರುವುದಾಗಿ ದೂರಲಾಗಿದೆ. ಇದರಿಂದ ಗ್ರಾಮ ಲೆಕ್ಕಾಧಿ ಕಾರಿಗೆ ಕರ್ತವ್ಯ ನಿರ್ವಹಿಸಲು ಭಯದ ವಾತಾವರಣ ಉಂಟಾಗಿದೆ. ಈ ವಿಚಾರವನ್ನು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರ ಗಮನಕ್ಕೆ ತರಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News