ಜಾಗತಿಕ ಸಾಮಾನ್ಯ ಪ್ರಯಾಣ ಎಚ್ಚರಿಕೆ ತೆರವುಗೊಳಿಸಿದ ಅಮೆರಿಕ

Update: 2020-08-07 17:09 GMT

ವಾಶಿಂಗ್ಟನ್, ಆ. 7: ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಮೆರಿಕನ್ನರಿಗಾಗಿ ಹೊರಡಿಸಲಾಗಿದ್ದ ಗರಿಷ್ಠ ಮಟ್ಟದ ಸಾಮಾನ್ಯ ಜಾಗತಿಕ ಆರೋಗ್ಯ ಎಚ್ಚರಿಕೆಯನ್ನು ಅಮೆರಿಕ ತೆರವುಗೊಳಿಸಿದೆ ಹಾಗೂ ಹಿಂದಿನಂತೆ ನಿರ್ದಿಷ್ಟ ದೇಶಕ್ಕಾಗಿ ಎಚ್ಚರಿಕೆಯನ್ನು ಹೊರಡಿಸುವ ವ್ಯವಸ್ಥೆಯನ್ನು ಮರುಜಾರಿಗೆ ತಂದಿದೆ. ಪ್ರಸಕ್ತ ಭಾರತ ಮತ್ತು ಚೀನಾ ಸೇರಿದಂತೆ 50ಕ್ಕೂ ಹೆಚ್ಚು ದೇಶಗಳಿಗೆ ಸಂಬಂಧಿಸಿ ಪ್ರಯಾಣ ಎಚ್ಚರಿಕೆ ಜಾರಿಯಲ್ಲಿದೆ.

ಅಮೆರಿಕದ ವಿದೇಶಾಂಗ ಇಲಾಖೆಯು, ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿದೇಶಗಳಿಗೆ ಪ್ರಯಾಣಿಸದಂತೆ ಜನರಿಗೆ ಸಲಹೆ ನೀಡುವ ಗರಿಷ್ಠ ನಾಲ್ಕನೇ ಮಟ್ಟದ ಪ್ರಯಾಣ ಎಚ್ಚರಿಕೆಯನ್ನು ಮಾರ್ಚ್ 19ರಂದು ಹೊರಡಿಸಿತ್ತು.

ಪ್ರಸಕ್ತ ನಾಲ್ಕನೇ ಮಟ್ಟದ ಪ್ರಯಾಣ ಎಚ್ಚರಿಕೆ ಜಾರಿಯಲ್ಲಿರುವ 50ಕ್ಕೂ ಅಧಿಕ ದೇಶಗಳ ಪಟ್ಟಿಯಲ್ಲಿ ಭಾರತ ಮುಂದುವರಿದಿದೆ ಹಾಗೂ ಚೀನಾವೂ ಅದರಲ್ಲಿದೆ.

ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಸಿರಿಯ, ಸೌದಿ ಅರೇಬಿಯ, ರಶ್ಯ, ಮೆಕ್ಸಿಕೊ, ಈಜಿಪ್ಟ್ ಮತ್ತು ಬ್ರೆಝಿಲ್ ಈ ಪ್ರಯಾಣ ನಿಷೇಧ ಪಟ್ಟಿಯಲ್ಲಿರುವ ದೇಶಗಳ ಪೈಕಿ ಕೆಲವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News