ಟಿಕ್‌ಟಾಕ್ ಜೊತೆಗಿನ ವ್ಯವಹಾರ 45 ದಿನಗಳಲ್ಲಿ ಬಂದ್: ಡೊನಾಲ್ಡ್ ಟ್ರಂಪ್ ಆದೇಶ

Update: 2020-08-07 17:23 GMT

ವಾಶಿಂಗ್ಟನ್, ಆ. 7: ಜನಪ್ರಿಯ ಸಾಮಾಜಿಕ ಮಾಧ್ಯಮ ಟಿಕ್‌ಟಾಕ್ ಅಥವಾ ಅದರ ಮಾತೃ ಸಂಸ್ಥೆ ಬೈಟ್‌ಡಾನ್ಸ್ ಜೊತೆಗೆ ವ್ಯವಹರಿಸುವುದರ ಮೇಲಿನ ನಿಷೇಧ ಇನ್ನು 45 ದಿನಗಳಲ್ಲಿ ಜಾರಿಗೆ ಬರುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ.

‘‘ನಮ್ಮ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವುದಕ್ಕಾಗಿ ಟಿಕ್‌ಟಾಕ್ ಮಾಲೀಕರ ವಿರುದ್ಧ ಕಠಿಣ ಕ್ರಮಗಳನ್ನು ಅಮೆರಿಕ ತೆಗೆದುಕೊಳ್ಳಲೇಬೇಕಾಗಿದೆ’’ ಎಂದು ತನ್ನ ಸರಕಾರಿ ಆದೇಶದಲ್ಲಿ ಟ್ರಂಪ್ ಹೇಳಿದ್ದಾರೆ.

ಈ ನಿಷೇಧ ಜಾರಿಗೆ ಬಂದ ಬಳಿಕ, ಅಮೆರಿಕದ ವ್ಯಾಪ್ತಿಗೆ ಒಳಪಡುವ ಯಾವುದೇ ವ್ಯಕ್ತಿ ಅಥವಾ ಯಾವುದೇ ಸಂಸ್ಥೆ, ಬೈಟ್‌ಡಾನ್ಸ್ ಲಿಮಿಟೆಡ್‌ನೊಂದಿಗೆ ಅಥವಾ ಅದಕ್ಕೆ ಸಂಬಂಧಪಡುವ ಯಾವುದೇ ಕಂಪೆನಿಯೊಂದಿಗೆ ಯಾವುದೇ ವ್ಯವಹಾರ ನಡೆಸುವಂತಿಲ್ಲ ಎಂದು ಆದೇಶ ಹೇಳುತ್ತದೆ.

ಚೀನಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಬೈಟ್‌ಡಾನ್ಸ್ ಟಿಕ್‌ಟಾಕ್ ಮಾಧ್ಯಮದ ಒಡೆತನ ಹೊಂದಿದೆ. ಅದರ ಅಮೆರಿಕ ಪ್ರಧಾನ ಕಚೇರಿ ದಕ್ಷಿಣ ಕ್ಯಾಲಿಫೋರ್ನಿಯದಲ್ಲಿದೆ. ಅಮೆರಿಕದಲ್ಲಿ 17.5 ಕೋಟಿ ಟಿಕ್‌ಟಾಕ್ ಬಳಕೆದಾರರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News