ದ.ಕ.: ಕೋವಿಡ್‌ಗೆ ಏಳು ಬಲಿ; ಹೊಸದಾಗಿ 166 ಮಂದಿಗೆ ಕೊರೋನ ಸೋಂಕು

Update: 2020-08-07 17:46 GMT

ಮಂಗಳೂರು, ಆ.7: ದ.ಕ. ಜಿಲ್ಲೆ ಕೊರೋನ ಹಾವಳಿ ಮಿತಿ ಮೀರಿದ್ದು, ದಿನದಿಂದ ದಿನಕ್ಕೆ ಸೋಂಕಿತರು ಹಾಗೂ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಶುಕ್ರವಾರ ಮತ್ತೆ ಏಳು ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಹೊಸದಾಗಿ 166 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮೃತರೆಲ್ಲರೂ ವಿವಿಧ ಬಗೆಯ ರೋಗಗಳಿಂದ ಬಳಲುತ್ತಿದ್ದರು. ಜೊತೆಗೆ ಕೊರೋನ ಸಹಿತ ದೃಢಪಟ್ಟಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಏಳು ಮಂದಿ ಕರೋನ ಸೋಂಕಿತರು ಮೃತಪಟ್ಟಿದ್ದಾರೆ. ಮೃತರ ಪೈಕಿ ಐವರು ಮಂಗಳೂರಿನವರಾದರೆ, ಪುತ್ತೂರು ಹಾಗೂ ಬೆಳ್ತಂಗಡಿಯ ತಲಾ ಓರ್ವರು ಇದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 208ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

166 ಮಂದಿಗೆ ಸೋಂಕು: ದ.ಕ. ಜಿಲ್ಲೆಯಲ್ಲಿ ಶುಕ್ರವಾರ 166 ಮಂದಿಯಲ್ಲಿ ಕೊರೋನ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕಿತರ ಪೈಕಿ 74 ಮಂದಿ ಮಂಗಳೂರಿನವರು. ಇನ್ನು ಬೆಳ್ತಂಗಡಿ-36, ಬಂಟ್ವಾಳ-25, ಪುತ್ತೂರು-13, ಸುಳ್ಯ-ಒಂದು, ಹೊರಜಿಲ್ಲೆಯ 17 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಶುಕ್ರವಾರ ದೃಢಪಟ್ಟ ಕೊರೋನ ಸೋಂಕಿತರ ಪೈಕಿ ಶೀತ-83, ನಿಗೂಢ ಪ್ರಕರಣ-51, ತೀವ್ರ ಉಸಿರಾಟ ತೊಂದರೆ-13, ಸೋಂಕಿತರ ಪ್ರಾಥಮಿಕ ಸಂರ್ಪದಲ್ಲಿದ್ದ 19 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 6,881ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ ಮಂಗಳೂರು ತಾಲೂಕು ಒಂದರಲ್ಲೇ 4,813 ಸೋಂಕು ಪ್ರಕರಣಗಳಿವೆ.

188 ಮಂದಿ ಗುಣಮುಖ: ಸಂತಸದಾಯಕ ಸಂಗತಿಯೆಂದರೆ ಜಿಲ್ಲೆಯ ವಿವಿಧ ಆಸ್ಪತ್ರೆ, ಆರೈಕೆ ಕೇಂದ್ರ ಹಾಗೂ ಮನೆಯಲ್ಲೇ ಚಿಕಿತ್ಸೆ ಪಡೆಯು ತ್ತಿದ್ದವರಲ್ಲಿ 188 ಮಂದಿ ಕೋವಿಡ್‌ಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 188 ಮಂದಿ ಗುಣಮುಖರಾಗಿದ್ದಾರೆ. ಗುಣಮುಖರಾದ ಸಂಖ್ಯೆಯಲ್ಲಿ ಇದು ದಾಖಲೆಯಾಗಿದೆ. ಈ ಮೊದಲು ದಿನಂಪ್ರತಿ ಗುಣಮುಖರಾಗುತ್ತಿದ್ದವರ ಸಂಖ್ಯೆ ನೂರರ ಆಸು-ಪಾಸಿನಲ್ಲಿತ್ತು. ಕೊರೋನ ದಿಂದ ಗುಣಮುಖರಾಗಿ ಮನೆಗೆ ತೆರಳಿದವರ ಸಂಖ್ಯೆ 3,304ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 3,369 ಸಕ್ರಿಯ ಪ್ರಕರಣಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News